ನಾಪತ್ತೆಯಾಗಿದ್ದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

0
20

ಉಪ್ಪಳ: ಸಾರಣೆ ಕಾರ್ಮಿಕನ ಮೃತದೇಹ ಬಾವಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಉಪ್ಪಳ ಪಚ್ಲಂಪಾರೆ ಎಸ್.ಸಿ ಕಾಲನಿ ನಿವಾಸಿ ವಿಜಯ-ಗಂಗವತಿ ದಂಪತಿ ಪುತ್ರ ಅಭಿಜಿತ್ (೨೨)ರ ಮೃತದೇಹ ಇಂದು ಬೆಳಿಗ್ಗೆ ಕಾಲನಿ ಸಮೀಪದ ಆವರಣ ರಹಿತ ಬಾವಿಯಲ್ಲಿ ಪತ್ತೆಯಾಗಿದೆ. ನಿನ್ನೆ ಬೆಳಿಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದ ಇವರು ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಸಂಜೆ ಗೆಳೆಯರೊಂದಿಗೆ ಆಟವಾಡಿರುವು ದಾಗಿ ತಿಳಿದು ಬಂದಿದ್ದು, ಮನೆಗೆ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾತ್ರಿಯಿಡೀ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಇಂದು ಮಂಜೇಶ್ವರ ಠಾಣೆಗೆ  ದೂರು ನೀಡಲಾಗಿದೆ. ಸ್ಥಳೀಯರೆಲ್ಲ ಸೇರಿ ಇಂದು ಬೆಳಿಗ್ಗೆ ಮತ್ತೆ ಹುಡುಕಾಡುತ್ತಿದ್ದಾಗ ಬಾವಿ ಬಳಿ ಸಸಿಯೊಂದು ಮುರಿದಿರುವಂತೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಬಾವಿಯಲ್ಲಿ ಹುಡುಕಾಡಿ ದಾಗ ಮೃತದೇಹ ಲಭಿಸಿದೆ. ಪೊಲೀ ಸರು, ಸ್ಥಳೀಯರು ಸೇರಿ ಮೃತದೇಹವನ್ನು ಮೇಲೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ.

ಮೃತ ಯುವಕ ತಂದೆ, ತಾಯಿ, ಸಹೋದರ ಅಜಿತ್, ಸಹೋದರಿ ಸರಿತಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ರಾತ್ರಿ ಈ ದಾರಿಯಾಗಿ ನಡೆದುಕೊಂಡು ಬರುತ್ತಿದ್ದಾಗ ಆಕಸ್ಮಾತ್ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

NO COMMENTS

LEAVE A REPLY