ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ

0
18

ಹೊಸದುರ್ಗ: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾಗಿದೆ. ಪಾಣತ್ತೂರು ಜುಮಾಮಸೀದಿಯ ಖತೀಬ್ ಸುಳ್ಯ ನಿವಾಸಿ ಇರ್ಶಾದ್ ಫೈಸಿ ಎಂಬವರ ಫೋರ್ಡ್ ಕಾರು ಬೆಂಕಿ ತಗಲಿ ನಾಶಗೊಂಡಿದೆ. ನಿನ್ನೆ ಇವರು ಸುಳ್ಯದತ್ತ ತೆರಳುತ್ತಿದ್ದಾಗ ಹಿಂಬದಿಯಿಂದ ಕಾರು ಉರಿಯುತ್ತಿರುವುದು ಕಂಡು ಬಂದಿದೆ. ಇರ್ಶಾದ್ ಫೈಸಿ ಕಾರು ಚಲಾಯಿಸುತ್ತಿದ್ದು ಬೆಂಕಿ ತಗಲಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಹಿಂಬದಿಯಿಂದ ಬಂದ ಆಂಬುಲೆನ್ಸ್ ಚಾಲಕ ನೀಡಿದ ಮಾಹಿತಿಯಂತೆ ಕಾರು ನಿಲ್ಲಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

NO COMMENTS

LEAVE A REPLY