ಅಂಗನವಾಡಿ ಮೇಲೆ ಆವರಣಗೋಡೆ ಕುಸಿತ

0
14

ವರ್ಕಾಡಿ: ಇಲ್ಲಿನ ನಲ್ಲೆಂಗಿ ಎಂಬಲ್ಲಿರುವ ಪೊಯ್ಯೆ ಅಂಗನವಾಡಿ ಮೇಲೆ ಆವರಣಗೋಡೆ ಕುಸಿದು ಬಿದ್ದಿದೆ. ಇಂದು ಬೆಳಿಗ್ಗೆ ೬.೩೦ರ ವೇಳೆ ಘಟನೆ ನಡೆದಿದೆ. ಸುಮಾರು ೨೦ ಮೀಟರ್ ಉದ್ದದ ಕಲ್ಲಿನ ಆವರಣಗೋಡೆ ಕುಸಿದಿದೆ. ಕಲ್ಲುಗಳು ಅಂಗನವಾಡಿ ಜಗಲಿಯೊಳಗೆ ಬಿದ್ದಿದೆ. ಅಂಗನವಾಡಿ ತೆರೆಯುವ ಮುಂಚೆ  ಈ ಘಟನೆ ಸಂಭವಿಸಿರುವುದರಿಂದ ಭಾರೀ ಅಪಾಯ ತಪ್ಪಿಹೋಗಿವೆ. ಘಟನೆ ಬಗ್ಗೆ ಕಾರ್ಯಕರ್ತೆ ಹೇಮಾವತಿ ನೀಡಿದ ಮಾಹಿತಿಯಂತೆ ವಾರ್ಡ್ ಪ್ರತಿನಿಧಿ ಆನಂದ ತಚ್ಚಿರೆ, ಗ್ರಾಮಾಧಿಕಾರಿ, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

NO COMMENTS

LEAVE A REPLY