ಕೂಲಿ ಕಾರ್ಮಿಕ ಕುಸಿದು ಬಿದ್ದು ಮೃತ್ಯು

0
17

ಬದಿಯಡ್ಕ: ಕೂಲಿ ಕಾರ್ಮಿ ಕನೋರ್ವ ಕುಸಿದು ಬಿದ್ದು ಮೃತಪಟ್ಟರು. ಗೋಳಿಯಡ್ಕ ಬಳಿಯ ಮತ್ತಿಕ್ಕಾನ ಶಿವನಿಲಯ ನಿವಾಸಿ ಸುಂದರ(೪೮) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ೭.೩೦ರ ವೇಳೆ ಮನೆಯಿಂದ ಹೊರಗಿಳಿಯುತ್ತಿದ್ದಂತೆ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಲು ಪ್ರಯತ್ನ ನಡೆಸುತ್ತಿದ್ದಂತೆ ನಿಧನ ಸಂಭವಿಸಿದೆ.

ಬಳ್ಳು-ಚೋಮಾರು ದಂಪತಿಯ  ಪುತ್ರನಾದ ಮೃತರು ಪತ್ನಿ ಸರಸ್ವತಿ, ಸಹೋದರಿಯರಾದ ಸುಶೀಲ, ಕಮಲ, ಲಲಿತಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಮನೆ ಹಿತ್ತಿಲಿನಲ್ಲಿ ನಡೆಸಲಾಯಿತು.

NO COMMENTS

LEAVE A REPLY