ಪ್ರಸಿದ್ಧ ಪಂಡಿತ ಸಿ.ಅಬ್ದುಲ್ಲ ಮುಸ್ಲಿಯಾರ್ ನಿಧನ

0
19

ಕುಂಬಳೆ: ಸುಮಾರು ನಾಲ್ಕು ದಶಕಗಳಿಂದ ಹಜ್ಜ್ ತೀರ್ಥಾಟನೆ ಮಾಡುವವರಿಗೆ ಮಾರ್ಗದರ್ಶಕರಾಗಿದ್ದ ಪ್ರಸಿದ್ಧ ಪಂಡಿತ ಸಿ. ಅಬ್ದುಲ್ಲ ಮುಸ್ಲಿ ಯಾರ್ (೭೪) ನಿಧನ ಹೊಂದಿದರು. ತಿಂಗಳುಗಳ ಹಿಂದೆ ವಾಹನ ಅಪಘಾ ತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ ಮೊಗ್ರಾಲ್ ನಲ್ಲಿರುವ ಸ್ವ-ಗೃಹದಲ್ಲಿ ನಿಧನ ಹೊಂದಿ ದರು. ಹಲವಾರು ಸುನ್ನಿ ಸಂಘಟನೆಗಳ, ಸಂಸ್ಥೆಗಳ ಸಾರಥಿಯಾಗಿದ್ದರು.

ಮೃತರು ಪತ್ನಿ ರುಖಿಯಾ ಹಜ್ಜುಮ್ಮ, ಮಕ್ಕಳಾದ ಅನೀಫ್ ಹಾಜಿ(ಉಪ್ಪಳ ಹಜ್ಜ್ ಗ್ರೂಪ್ ನಿರ್ದೇಶಕ), ಎ.ಕೆ.ಸಿ. ಅಬ್ದುಲ್ ಖಾದಿರ್ ಸಖಾಫಿ, ತ್ವಾಹಿರ, ಅಳಿಯ ಹಾಜಿ ಯೂಸಫ್ ಮದನಿ, ಸೊಸೆಯಂದಿರಾದ ಮೈಮೂನ, ರಸಿಯ, ಸಹೋದರ ಮಮ್ಮು ಹಾಜಿ, ಸಹೋದರಿಯರಾದ ನಫೀಸ, ಖದೀಜ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

NO COMMENTS

LEAVE A REPLY