ಲೋಕಲ್ ಫಂಡ್ ಆಡಿಟರ್ ಚಕ್ರೇಶ್ವರ ನಾಯ್ಕ ಹೃದಯಾಘಾತದಿಂದ ನಿಧನ

0
23

ನೀರ್ಚಾಲು: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಸ್ವಸ್ಥತೆಯುಂಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಲೋಕಲ್ ಫಂಡ್ ಆಡಿಟರ್ ಹೃದಯಾಘಾತ ದಿಂದ ಮೃತಪಟ್ಟ ಘಟನೆ ನಡೆದಿದೆ.

ನೀರ್ಚಾಲು ಮಲ್ಲಡ್ಕ ನಿವಾಸಿಯೂ ಕಾಸರಗೋಡು ಕಲೆಕ್ಟರೇಟ್ ಲೋಕಲ್ ಫಂಡ್ ಆಡಿಟರ್ ಆಗಿರುವ ಚಕ್ರೇಶ್ವರ ನಾಯ್ಕ (೪೭) ಎಂಬವರು ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಇವರು ಕಚೇರಿಗೆ ತಲುಪಿ ಕೆಲಸ ಆರಂಭಿಸಿದ್ದರು. ಅಲ್ಪ ಹೊತ್ತಿನಲ್ಲಿ ಇವರಿಗೆ ಅಸ್ವಸ್ಥತೆ ಕಂಡುಬಂದಿತ್ತು. ಕೂಡಲೇ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಬಳಿಕ ಮನೆಗೆ ತಲುಪಿಸಿದ್ದರು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇವರಿಗೆ ಅಪರಾಹ್ನ ೩.೩೦ರ ವೇಳೆ ಮತ್ತೆ ತೀವ್ರ ಅಸೌಖ್ಯ ಕಂಡುಬಂದಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ಕರೆದೊ ಯ್ಯುತ್ತಿದ್ದಂತೆ ದಾರಿ ಮಧ್ಯೆ ನಿಧನ ಸಂಭವಿಸಿದೆ. ಕೇರಳ ಮರಾಟಿ ಶಾರದೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಚಕ್ರೇಶ್ವರ ನಾಯ್ಕರು ಇದೀಗ ಸಮಿತಿಯ ನಿರ್ದೇಶಕ ರಾಗಿದ್ದರು.

ರಾಮ ನಾಯ್ಕ-ಸೀತು ದಂಪತಿಯ ಪುತ್ರನಾದ ಇವರು ಪತ್ನಿ ಜಯಂತಿ (ಕೆಎಸ್‌ಇಬಿ ಉದ್ಯೋಗಿ), ಮಕ್ಕಳಾದ ಚಿತ್ರಾ, ಲತಾಶ್ರೀ, ಸಹೋದರರಾದ ಬಟ್ಯ ನಾಯ್ಕ, ಗೋವಿಂದ ನಾಯ್ಕ, ಗೋಪಾಲ ನಾಯ್ಕ, ಕೃಷ್ಣ ನಾಯ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನೂರಾರು ಮಂದಿಯ ಅಂತಿಮ ನಮನದ ಬಳಿಕ ಮನೆ ಹಿತ್ತಿಲಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

NO COMMENTS

LEAVE A REPLY