ಉಪ್ಪಳ ವಾಹನ ಅಪಘಾತ: ಚಿಕಿತ್ಸೆಯಲ್ಲಿದ್ದ ಮಗು ಮೃತ್ಯು; ಲಾರಿ ಚಾಲಕ ಸೆರೆ

0
21

ಉಪ್ಪಳ: ರಾಷ್ಟ್ರೀಯ ಹೆದ್ದಾರಿ  ಉಪ್ಪಳ ನಯಾಬಜಾರ್‌ನಲ್ಲಿ ಮೊನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಗು ನಿನ್ನೆ ಸಂಜೆ ಮೃತಪಟ್ಟಿತು. ಇದರೊಂದಿಗೆ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ. ಅಪಘಾತದಲ್ಲಿ ಮೃತಪಟ್ಟಿದ್ದ ನಸೀಮ ಎಂಬವರ ಪುತ್ರಿ ಫಾತಿಮ(೧ ವರ್ಷ) ಇದೀಗ ಮೃತಪಟ್ಟ ಮಗು. ಗಂಭೀರ ಗಾಯಗೊಂಡಿದ್ದ ಮಗು ವನ್ನು ಮಂಗಳೂರಿನ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ದಾಖಲಿಸಲಾ ಗಿತ್ತು. ಇದೀಗ ಮಕ್ಕಳ ಸಹಿತ ೧೧ ಮಂದಿ ಚಿಕಿತ್ಸೆಯಲ್ಲಿದ್ದಾರೆ.  ಕ್ರೂಯಿಸ್ ಜೀಪು ಹಾಗೂ ಸರಕು ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಪಾಲಕ್ಕಾಡ್‌ನಲ್ಲಿ ಸಂಬಂಧಿಕರ ಮನೆಯ ಗೃಹಪ್ರವೇಶ ಕಳೆದು ಮರಳುತ್ತಿದ್ದವರು ಪ್ರಯಾಣಿ ಸಿದ ಜೀಪು ಹಾಗೂ ಮಂಗಳೂರಿನಿಂ ದ ಕಾಸರಗೋಡಿನತ್ತ ಸರಕು ಸಾಗಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ತಲಪಾಡಿ ಕೆ.ಸಿ. ರೋಡ್ ಅಜಿನಡ್ಕ ನಿವಾಸಿ ಮೊಯ್ದೀನ್ ಎಂಬವರ ಪತ್ನಿ ಬೀಫಾತ್ತಿಮ(೬೫), ಇವರ ಅಳಿಯ ಮುಸ್ತಾಕ್(೪೧), ಸಂಬಂಧಿಕರಾದ ಇಮ್ತಿಯಾಸ್(೩೫), ಇವರ ಪತ್ನಿ ಆಸ್ಮಾ(೩೦), ಸಂಬಂಧಿಕೆ ನಸೀಮ (೩೮) ಎಂಬಿವರು ಮೃತಪಟ್ಟಿದ್ದರು.  ಇದೇ ವೇಳೆ ಅಪಘಾತಕ್ಕೀಡಾದ ಲಾರಿ ಚಾಲಕ ಕರ್ನಾಟಕ ಶಿವಮೊಗ್ಗ ನಿವಾಸಿ ಅಯೂಬ್(೪೮)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

NO COMMENTS

LEAVE A REPLY