ನೆಲ್ಲಿಕಟ್ಟೆ: ಮನೆಗೆ ನುಗ್ಗಿದ ದರೋಡೆಕೋರ ಮಹಿಳೆಯರು, ಮಗುವಿಗೆ ಇರಿದು ಗಾಯಗೊಳಿಸಿ ೧೦ ಪವನ್ ಚಿನ್ನಾಭರಣ ಅಪಹರಣ

0
42

ನೆಲ್ಲಿಕಟ್ಟೆ: ಮುಂಜಾನೆ ಹೊತ್ತಿನಲ್ಲಿ ಮನೆಗೆ ನುಗ್ಗಿದ ದರೋಡೆಕೋರ ಇಬ್ಬರು ಮಹಿಳೆಯರಿಗೆ ಹಾಗೂ ಮಗುವಿಗೆ ಇರಿದು ಗಾಯಗೊಳಿಸಿ, ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿ ಚಿನ್ನಾಭರಣ ದರೋಡೆಗೈದ ಘಟನೆ ನಡೆದಿದೆ.

ನೆಲ್ಲಿಕಟ್ಟೆ-ಪೈಕ ರಸ್ತೆಯ ಚೂರಿಪಳ್ಳ ಎಂಬಲ್ಲಿ ಇಂದು ಮುಂಜಾನೆ ೩ ಗಂಟೆ ವೇಳೆ ಈ ಘಟನೆ ನಡೆದಿದೆ. ಚೂರಿಪಳ್ಳ ಬದ್ರಿಯ ಮಂಜಿಲ್ ನಿವಾಸಿ ಮುಸ್ಲಿಂ ಲೀಗ್ ನೇತಾರನಾಗಿದ್ದ ದಿ| ಬೀರಾನ್ ಹಾಜಿಯವರ ಮನೆಗೆ ದರೋಡೆಕೋರ ನುಗ್ಗಿದ್ದಾನೆ. ದರೋಡೆಕೋರನ ಆಕ್ರಮಣದಿಂದ ಬೀರಾನ್ ಹಾಜಿಯವರ ಪತ್ನಿ ಆಮಿನ (೫೨), ಗಲ್ಫ್‌ನಲ್ಲಿರುವ ಪುತ್ರ ಆಫಿಸ್‌ನ ಪತ್ನಿ ಮರಿಯಾಂಬಿ (೨೫), ಈಕೆಯ ಪುತ್ರ ಮೊಹಮ್ಮದ್ ಆದಿ (೨) ಎಂಬಿವರು ಗಾಯಗೊಂಡಿದ್ದು ಅವರನ್ನು ಚೆಂಗಳದ ಇ.ಕೆ. ನಾಯನಾರ್ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಇವರಿಗೆ ಇರಿದು ಗಾಯ ಗೊಳಿಸಿದ ದರೋಡೆ ಕೋರ ಚಿನ್ನದ ಎರಡು ಮಾಲೆ, ಒಂದು ಬಳೆ, ಎರ ಡೂವರೆ ಪವನ್‌ನ ವಾಚ್ ಎಂಬಿವು ಗಳನ್ನು ಅಪಹರಿಸಿದ್ದಾನೆ. ಸುಮಾರು ಹತ್ತು ಪವನ್ ಚಿನ್ನಾಭರಣ ದರೋಡೆಗೈಯ್ಯ ಲಾಗಿದೆಯೆಂದು ದೂರಲಾಗಿದೆ.

ಮನೆಯ ಹಿಂಬದಿಯ ಕಿಟಿಕಿಯ ಸರಳು ಮುರಿದು ದರೋಡೆಕೋರ ಒಳಗೆ ನುಗ್ಗಿದ್ದಾನೆ. ಮನೆಯೊಳಗೆ ನುಗ್ಗಿದ ದರೋಡೆಕೋರ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸತೊಡಗಿದಾಗ ಶಬ್ದ ಕೇಳಿ ಆಮಿನ ಎಚ್ಚೆತ್ತಿದ್ದಾರೆ. ಅವರು ಬೆಳಕು ಹಾಯಿಸಿ ನೋಡಿದಾಗ ದರೋಡೆಕೋರ ಅವರ ಕಣ್ಣಿಗೆ ಮೆಣಸಿನಹುಡಿ ಎರಚಲು ಯತ್ನಿಸಿ ಅವರ ಕುತ್ತಿಗೆಗೆ ಚಾಕು  ಇರಿಸಿ ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆಮಿನರ ಬೊಬ್ಬೆ ಕೇಳಿ ಮರಿಯಾಂಬಿ ಎದ್ದು ಅಲ್ಲಿಗೆ ಬಂದಿದ್ದು, ಅಷ್ಟರಲ್ಲಿ ಆಕೆಗೂ  ಇರಿಯಲು ದರೋಡೆಕೋರ  ಯತ್ನಿಸಿ ದ್ದಾನೆ. ಸುಮಾರು ಹತ್ತು ನಿಮಿಷಗಳ ಕಾಲ ನಡೆದ ಹೊಕೈಯ ಬಳಿಕ ದರೋಡೆಕೋರ ನಿಂದ ತಪ್ಪಿಸಿಕೊಂಡ ಮಹಿಳೆಯರು ಕೊಠಡಿಯೊಳಗೆ ನುಗ್ಗಿ ಬಾಗಿಲಿನ ಚಿಲಕ ಹಾಕಿದ್ದಾರೆ. ಈವೇಳೆ ಮರಿಯಾಂಬಿಯ ಮಕ್ಕಳಾದ ಇಸಾಫಾತಿಮ (೫), ಮೊಹ ಮ್ಮದ್ ಆದಿ (೨) ಎಂಬಿವರು ನಿದ್ರಿಸಿದ್ದ ಕೊಠಡಿಗೆ ನುಗ್ಗಿದ ದರೋಡೆಕೋರ ಚಿನ್ನಾಭರಣ ನೀಡದಿದ್ದರೆ   ಮಕ್ಕಳನ್ನು ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿ ದ್ದಾನೆ. ಅಲ್ಲದೆ ಮೊಹಮ್ಮದ್ ಆದಿಗೆ ಇರಿದಿದ್ದು, ಇದರಿಂದ ಮಗುವಿನ ಕೈಗೆ ಗಾಯಗಳಾಗಿವೆ.  ಇನ್ನು ಅಪಾಯ ಸಂಭವಿಸುವುದು ಖಚಿತವೆಂದು ತಿಳಿದ ಮಹಿಳೆಯರು ಚಿನ್ನಾಭರಣವನ್ನು ದರೋ ಡೆಕೋರನಿಗೆ ನೀಡಿದ್ದಾರೆನ್ನಲಾಗಿದೆ.  ಚಿನ್ನಾಭರಣ ಪಡೆದುಕೊಂಡ ದರೋಡೆ ಕೋರ ಮನೆಯೊಳಗೆ ನುಗ್ಗಿದ ಕಿಟಿಕಿ ಮೂಲಕವೇ ಹೊರಕ್ಕಿಳಿದು ಪರಾರಿಯಾ ಗಿದ್ದಾನೆ. ದರೋಡೆಕೋರ ಹೋದ ಬಳಿಕ ಮಹಿಳೆಯರು ನೆರೆಮನೆಯವರಿಗೆ ವಿಷಯ ತಿಳಿಸಿದ್ದು, ಅವರು ತಲುಪಿ ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. 

NO COMMENTS

LEAVE A REPLY