ಕಾಡುಹಂದಿ ಆಕ್ರಮಣ: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

0
31

ಉಪ್ಪಳ: ಕಾಡುಹಂದಿಯ ಆಕ್ರಮಣಕ್ಕೊಳಗಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಹೇರೂರು ಬಳಿ ನಡೆದಿದೆ.

ಹೇರೂರು ಮೀಪಿರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಗಳಾದ ಸೈನಾಬತ್ ಶಮ್ಲಾ, ಮತ್ತು ಮುಷ್ನಾನ ಎಂಬಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ವಿದ್ಯಾರ್ಥಿಗಳು ಸಂಜೆ ಶಾಲೆಬಿಟ್ಟು ಮೈದಾನ ಬಳಿ ಬಸ್‌ಗಾಗಿ ಕಾದು ನಿಂತಿದ್ದ ವೇಳೆ ಕಾಡುಹಂದಿ  ಆಕ್ರಮಿಸಿದೆ.   ಅಲ್ಲಿದ್ದ ಇತರ ನಾಲ್ವರು ವಿದ್ಯಾರ್ಥಿಗಳು ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ.

NO COMMENTS

LEAVE A REPLY