ವಾಮ ಪಕ್ಷದ ಕಾರ್ಯಕರ್ತರಿಗೂ ರಾಮ..ರಾಮ.. ಪಾಹಿಮಾಂ ಸ್ತುತಿ ಹಾಡಲು ಅವಕಾಶ

0
35

ತಿರುವನಂತಪುರ: ರಾಮಾಯಣ ಪಾರಾಯಣ ಇನ್ನು ಸಿಪಿಎಂ ಕಾರ್ಯಕರ್ತರಿಗೆ ನಿಷಿದ್ಧವಾಗದು. ರಾಮಾಯಣ ಆಧಾರಿತ ಹೊಸ ಸಂದೇಶಗಳನ್ನು ಮೈಗೂಡಿಸಿಕೊಂಡು ಆ ಮೂಲಕ ಆಸ್ತಿಕರನ್ನು ತಮ್ಮತ್ತ ಆಕರ್ಷಿಸುವಂತೆ ಮಾಡಲು ಸಿಪಿಎಂ ಪರ ನಿಲುವು ಹೊಂದಿರುವ ಒಕ್ಕೂಟದವರು ಸಂಸ್ಕೃತ ಸಂಘ ಎಂಬ ಹೊಸ ಸಂಘಟನೆಗೆ ರೂಪು ನೀಡಿದ್ದಾರೆ. ಮಾತ್ರವಲ್ಲ, ಅದರ ಹೆಸರಲ್ಲಿ ಕರ್ಕಟಕಮಾಸದಲ್ಲಿ ರಾ ಮಾಯಣ ಮಾಸಾಚರಣೆ ನಡೆಸಲು ತೀರ್ಮಾನಿಸಲಾಗಿದೆ. 

ಶ್ರೀಕೃಷ್ಣ ಜಯಂತಿ ದಿನದಲ್ಲಿ ಶೋಭಾಯಾತ್ರೆ ನಡೆಸಿ ಪಕ್ಷದಿಂದ  ಅಗಲುತ್ತಿದ್ದ ಆಸ್ತಿಕ ಕಾರ್ಯಕರ್ತ ರನ್ನು ಪಕ್ಷದಲ್ಲೇ ಉಳಿಸಿ ಕೊಳ್ಳುವಂತೆ ಮಾಡುವ ಕ್ರಮ ಸಿಪಿಎಂ ಪರ ಸಂಘಟನೆಗಳು ವರ್ಷಗಳ ಹಿಂದೆ ಆರಂಭಿಸಿತ್ತು. ಈಗ   ರಾಮಾಯಣ ಪಾರಾಯಣ ಮಾಸಾಚರಣೆ ಆರಂಭಿಸುವ ಮೂಲಕವೂ ಶ್ರೀರಾಮ ಸ್ತುತಿಯನ್ನು ಹಾಡಲು ಪಕ್ಷದ ಕಾರ್ಯಕರ್ತರರಿಗೆ ಆಸ್ಪದ ನೀಡಿ, ಜತೆಗೆ ಇತರ ಆಸ್ತಿಕರನ್ನು ತಮ್ಮತ್ತ ಸೆಳೆದುಕೊಳ್ಳಲು   ಸಿಪಿಎಂ ಪರ ನಿಲುವು ಹೊಂದಿರುವವರು ಸೇರಿ ರೂಪು ನೀಡಿರುವ ಹೊಸ ಸಂಸ್ಕೃತ ಸಂಘ ಪ್ರಯತ್ನದಲ್ಲಿ ತೊಡಗಿದೆ.

ಇಂತಹ  ಕಾರ್ಯಕ್ರಮಗಳ ಮೂಲಕ ಆಸ್ತಿಕವಾದಕ್ಕೆ ತಾವು ಎಂದೂ ವಿರೋಧವಲ್ಲ ಎಂಬ ಸಂದೇಶವನ್ನು  ಸಿಪಿಎಂ ಪರೋಕ್ಷವಾಗಿ ನೀಡತೊಡಗಿದೆ. ಧಾರ್ಮಿಕ ಚಿಂತನೆ ಆಧಾರದಲ್ಲಿ  ಆಸ್ತಿಕರನ್ನು ಇತ್ತೀಚೆಗಿನಿಂದ ಬಿಜೆಪಿ ಹೆಚ್ಚಾಗಿ ಅವರತ್ತ ಆಕರ್ಷಿಸತೊಡಗಿದೆ. ಅದಕ್ಕೆ ಇನ್ನು ಆಸ್ಪದ ನೀಡದೆ ತಮ್ಮ ಪಕ್ಷದ ಮತ್ತು ಇತರ ಆಸ್ತಿಕರನ್ನು ಪಕ್ಷಕ್ಕೆ ಇನ್ನಷ್ಟು ಸೆಳೆಯುವಂತೆ ಮಾಡುವು ದೇ ಸಂಸ್ಕೃತ ಸಂಘದ ಪ್ರಧಾನ ಉದ್ದೇಶವಾಗಿದೆ.

ಈ ಪ್ರಯೋಗ ಜ್ಯಾರಿಗೊಳಿಸಲು ರೂಪು ನೀಡಲಾದ ಸಂಸ್ಕೃತ ಸಂಘದಲ್ಲಿ ಸಂಸ್ಕೃತ ಅಧ್ಯಾಪಕರು, ಸಂಸ್ಕೃತ ಪಂಡಿತರು ಮತ್ತು ಸಂಸ್ಕೃತ ಭಾಷೆಯೊಂದಿಗೆ ಆಸಕ್ತಿ ಹೊಂದಿರುವ ಸಾಂಸ್ಕೃತಿಕ ರಂಗಗಳ ಕಾರ್ಯಕರ್ತರನ್ನು ಒಳಪಡಿಸಿ  ಸಂಘಕ್ಕೆ  ರೂಪು ನೀಡಲಾಗಿದೆ. ರಾಮಾಯಣ ಪಾರಾಯಣ ಮಾಸಾಚರಣೆ ಜುಲೈ ೧೭ರಂದು ಆರಂಭಗೊಳ್ಳಲಿದೆ. ಅದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಸ್ಕೃತ ಸಂಘ ತೀರ್ಮಾನಿಸಿದೆ.  ರಾಮಾಯಣ ಧಾರ್ಮಿಕ ಪ್ರವಚನ, ತರಗತಿಗಳು ಮತ್ತು ವಿಚಾರಗೋಷ್ಠಿಗಳನ್ನು ನಡೆಸಲು ತೀರ್ಮಾನಿಸಿದೆ. ಈ ಕಾರ್ಯಕ್ರಮಗಳ ರಾಜ್ಯಮಟ್ಟದ ಉದ್ಘಾಟನೆ  ೨೫ರಂದು ತಿರುವನಂತಪುರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಸಿಪಿಎಂ ನೇತೃತ್ವದಲ್ಲಿ ರಾಮಾಯಣ ಪಾರಾಯಣ ಮಾಸಾಚರಣೆ ನಡೆಸಲು ತೀರ್ಮಾನಿ ಸಲಾಗಿದೆ ಎಂಬ  ಪ್ರಚಾರ ಆಧಾರ ರಹಿತವಾದುದೆಂದು ಸಂಸ್ಕೃತ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಆದರೆ  ರಾಮಾಯಣ ಮಾಸಾಚರಣೆಗೆ ಸಿಪಿಎಂನ ಬೆಂಬಲ   ಇದೆ ಎಂದು ಅವರು ತಿಳಿಸಿದ್ದಾರೆ.

NO COMMENTS

LEAVE A REPLY