ಖರ್ಚಿಗೆ ಹಣ ಕೇಳಿ ತಲುಪಿದ ಯುವತಿಗೆ ಹಲ್ಲೆ: ಸೀಮೆಎಣ್ಣೆ ಸುರಿದು ಕಿಚ್ಚಿಡಲೆತ್ನ; ಪತಿ ಸಹಿತ ಮೂವರ ವಿರುದ್ಧ ಕೇಸು

0
27

ಕುಂಬಳೆ: ಖರ್ಚಿಗೆ ಹಣ ಕೇಳಿ ತಲುಪಿದ ಯುವತಿಗೆ ಪತಿ ಹಾಗೂ ಆತನ ತಂದೆ, ತಾಯಿ ಸೇರಿ ಹಲ್ಲೆಗೈದಿದ್ದು, ಬಳಿಕ ದೇಹಕ್ಕೆ ಸೀಮೆಎಣ್ಣೆ ಸುರಿದು ಕಿಚ್ಚಿಡಲು ಯತ್ನಿಸಿರುವುದಾಗಿ ದೂರಲಾಗಿದೆ.

ಹೊಸಂಗಡಿ ನಿವಾಸಿ ದಿ|ಇದ್ದಿನ್‌ಕುಂಞಿಯವರ ಪುತ್ರಿ ಫಾತಿಮತ್ ಶಬಾನ(೨೯) ಗಾಯಗೊಂ ಡಿದ್ದು, ಈಕೆಯನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಸಂಬಂಧ ಶಿರಿಯ ಕುನ್ನಿಲ್ ನಿವಾಸಿ ಮುಸಮ್ಮಿರ್(೩೬), ಈತನ ತಂದೆ ಹುಸೈನ್ ಹಾಜಿ(೭೦), ತಾಯಿ ಆಯಿಷ(೬೨) ಎಂಬವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಶಿರಿಯದ ಪತಿ ಮನೆಯಲ್ಲಿ ಘಟನೆ ನಡೆದಿದೆಯೆಂದು ದೂರಲಾಗಿದೆ.

ಫಾತಿಮತ್ ಶಬಾನ ಹಾಗೂ ಮುಸಮ್ಮಿಲ್‌ರ ವಿವಾಹ ೨೦೦೯ರಲ್ಲಿ ನಡೆದಿತ್ತು. ಈ ವೇಳೆ ೧೦೦ ಪವನ್ ಚಿನ್ನಾಭರಣ ಹಾಗೂ ಎರಡು ಲಕ್ಷ ರೂಪಾಯಿ ನೀಡಿರುವುದಾಗಿ ಶಬಾನ ತಿಳಿಸುತ್ತಿದ್ದಾರೆ.  ಮದುವೆ ಬಳಿಕ ಶಬಾನ ತಾಯಿ ಮನೆಯಲ್ಲೇ ವಾಸವಾಗಿದ್ದರು. ಗಲ್ಫ್‌ನಲ್ಲಿದ್ದ ಪತಿ ಹತ್ತು ತಿಂಗಳ ಹಿಂದೆ ಮರಳಿ ಊರಿಗೆ ಬಂದಿರುವುದಾಗಿ ಶಬಾನ ತಿಳಿಸುತ್ತಿದ್ದಾರೆ. ಈ ಮಧ್ಯೆ ಶಬಾನ ಕುಟುಂಬ ನ್ಯಾಯಾಲಯವನ್ನು ಸಮೀಪಿಸಿದ್ದು, ಇದರಂತೆ ಆಕೆಗೆ ಖರ್ಚಿಗೆ ಹಣ ನೀಡುವಂತೆ ಆದೇಶಿಸಲಾಗಿತ್ತು. ಆದರೆ ಆತ ಹಣ ನೀಡಲು ಮುಂದಾಗಿರಲಿಲ್ಲ.  ಮುಸಮ್ಮಿಲ್ ಬೇರೊಬ್ಬಳನ್ನು ವಿವಾಹವಾಗಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ ಖರ್ಚಿಗೆ ಹಣ ಕೇಳಿ ಪತಿ ಮನೆಗೆ ತಲುಪಿರುವುದಾಗಿಯೂ, ಈ ವೇಳೆ ಪತಿ ಹಾಗೂ ಆತನ ತಂದೆ ತಾಯಿ ಸೇರಿ ಹಲ್ಲೆಗೈದು ದೇಹಕ್ಕೆ ಸೀಮೆಎಣ್ಣೆ ಸುರಿದಿರುವುದಾಗಿ ಫಾತಿಮತ್ ಶಬಾನ ಆರೋಪಿಸಿದ್ದಾರೆ.

NO COMMENTS

LEAVE A REPLY