ಕೇಂದ್ರ ಅನಾಥಾಲಯಗಳಿಗೆ ಮಂಜೂರು ಮಾಡಿದ ಹಣವನ್ನು ಕೇರಳ ಏನು ಮಾಡಿದೆ-ಸುಪ್ರೀಂ ಕೋರ್ಟ್

0
21

ಹೊಸದಿಲ್ಲಿ: ಕೇರಳದ ಅನಾ ಥಾಲಯಗಳಿಗೆ ಕೇಂದ್ರ ಸರಕಾರ ಮಂಜೂರು ಮಾಡಿದ ಹಣವನ್ನು ಏನು ಮಾಡಲಾಗಿದೆ ಎಂದು ಕೇರಳ ಸರಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಈ ವಿಷಯದ ಬಗ್ಗೆ ಕೇರಳ ಸರಕಾರದ ಪರವಾಗಿ ಮುಖ್ಯ ಕಾರ್ಯದರ್ಶಿಯವರು ಸಲ್ಲಿಸಿದ ಅಫಿದಾವಿತ್‌ನಲ್ಲಿ ಯಾವುದೇ ರೀತಿಯ ಸ್ಪಷ್ಟತೆ ತೋರುತ್ತಿಲ್ಲವೆಂದು ನ್ಯಾಯಮೂರ್ತಿ ಮದನ್ ಬಿ. ಲೋಕೋರ್‌ರವರ ಅಧ್ಯಕ್ಷರಾ ಗಿರುವ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಬಾಲನೀತಿ ಕಾನೂನು ಪ್ರಕಾರ ನೋಂದಾವಣೆ ನಡೆಸದೆ  ನೂರಾರು ಅನಾಥಾಲಯಗಳನ್ನು ಮುಚ್ಚಲಾಗಿದೆ ಎಂದು ಕೇರಳ ಸರಕಾರ ಸಲ್ಲಿಸಿದ ಅಫಿದಾವಿತ್ತ್‌ನಲ್ಲಿ ತಿಳಿಸಲಾಗಿದೆ. ಆದರೆ ಹೀಗೆ ಮುಚ್ಚಲಾದ ಅನಾಥಾಲಯಗಳಲ್ಲಿ ವಾಸವಾಗಿದ್ದ ಅನಾಥ ಮಕ್ಕಳನ್ನು ಎಲ್ಲಿಗೆ ಸಾಗಿಸಲಾಗಿದೆ ಎಂಬ ಬಗ್ಗೆ ಅಫಿದಾವಿತ್‌ನಲ್ಲಿ ಯಾವುದೇ ರೀತಿಯ ಮಾಹಿತಿ ಇಲ್ಲ. ಅದನ್ನೆಲ್ಲಾ ಒಳಪಡಿಸಿ ಮತ್ತು ಕೇಂದ್ರ ಸರಕಾರ ಕೇರಳದ ಅನಾಥಾಲಯಗಳಿಗೆ ಮಂಜೂರು ಮಾಡಿದ ಹಣವನ್ನೆಲ್ಲಾ ಏನು ಮಾಡಲಾಗಿದೆ ಎಂಬ ಬಗ್ಗೆ ಮುಂದಿನ ನಾಲ್ಕು ವಾರದೊಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಕೇರಳ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನಿರ್ದೇಶ ನೀಡಿದೆ.

ಅನಾಥಾಲಯಗಳಿಗೆ ಎರಡು ರೀತಿಯ ನೋಂದಾವಣೆ ಏರ್ಪಡಿಸಿದ ಕೇರಳ ಸರಕಾರದ ಕ್ರಮವನ್ನು ಪ್ರಶ್ನಿಸಿ ಕೇರಳದ ಧಾರ್ಮಿಕ ಸಂಘಟನೆ ಯೊಂದರ ಆಶ್ರಯದಲ್ಲಿ ಕಾರ್ಯ ವೆಸಗುತ್ತಿರುವ ಅನಾಥಾಲಯವೊಂದರ ಪದಾಧಿಕಾರಿಗಳು  ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅದನ್ನು ಪರಿಶೀಲಿಸುತ್ತಿದ್ದ ವೇಳೆ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠ ಕೇರಳ ಸರಕಾರಕ್ಕೆ ಈ ನಿರ್ದೇಶ ನೀಡಿದೆ.

NO COMMENTS

LEAVE A REPLY