ಹೊಯ್ಗೆ ಸಾಗಿಸುವ ವಾಹನಗಳ ಸಿಬ್ಬಂದಿಗಳಿಂದ ಲಂಚ ಸ್ವೀಕಾರ ಆರೋಪ: ಕ್ರೈಂಬ್ರಾಂಚ್ ತನಿಖೆ ಆರಂಭ

0
27

ಮಂಜೇಶ್ವರ: ಹೊಯ್ಗೆ ಸಾಗಾಟ ಲಾರಿಗಳ ಸಿಬ್ಬಂದಿಗಳಿಂದ ಲಂಚ ಸ್ವೀಕರಿಸಿದ ಆರೋಪದಂತೆ ಮಂಜೇ ಶ್ವರ ಅಬಕಾರಿ ತಪಾಸಣಾ ಕೇಂದ್ರದ ನಾಲ್ವರು ಸಿಬ್ಬಂದಿಗಳನ್ನು  ಕಾಸರಗೋಡು ಅಬಕಾರಿ ಉಪ ಆಯುಕ್ತ ತನಿಖಾ ವಿಧೇಯ ಗೊಳಿಸಿ ಅಲ್ಲಿಂದ ಬೇರೆಡೆಗೆ ವರ್ಗಾಯಿಸಿದ್ದಾರೆ.

ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರಗಳ ಮೂಲಕ ಹೊರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವ ಹೊಯ್ಗೆ ಹೇರಿದ ಲಾರಿಗಳನ್ನು ತಪಾಸಣೆಗೊಳಪಡಿಸದೆ,  ಲಂಚ ಸ್ವೀಕರಿಸಿ, ಕೇರಳಕ್ಕೆ ಪ್ರವೇಶಿಸಬಿಟ್ಟ ಬಗ್ಗೆ ಈ ನಾಲ್ವರು ಅಬಕಾರಿ ಸಿಬ್ಬಂದಿಗಳ ವಿರುದ್ಧ ಆರೋಪ ಉಂಟಾಗಿತ್ತು. ಆ ಹಿನ್ನೆಲೆಯಲ್ಲಿ ಈ ನಾಲ್ವರು ಸಿಬ್ಬಂದಿ ಗಳನ್ನು ತಪಾಸಣಾ ಕೇಂದ್ರದಿಂದ ಜಿಲ್ಲೆಯ ಇತರ ಅಬಕಾರಿ ಕಚೇರಿಗಳಿಗೆ ವರ್ಗಾವಣೆಗೊಳಿಸ ಲಾಗಿದೆ.

ಹೊರರಾಜ್ಯಗಳಿಂದ ಅನಧಿಕೃತವಾಗಿ ಕೇರಳಕ್ಕೆ ಹೊಯ್ಗೆ ಸಾಗಿಸುವ ಲಾರಿ ಇತ್ಯಾದಿ ವಾಹನಗಳ ಸಿಬ್ಬಂದಿಗಳಿಂದ ಲಂಚ ಸ್ವೀಕಾರ ಮಾಡಿದ ಬಗ್ಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೂವರು ಪೊಲೀಸರನ್ನು ಕೆಲವು ದಿನಗಳ ಹಿಂದೆಯಷ್ಟೇ ತನಿಖಾ ವಿಧೇಯಗೊಳಿಸಿ ಪೊಲೀಸ್ ಸೇವೆಯಿಂದ ಅಮಾನತು ಗೊಳಿಸಲಾಗಿತ್ತು. ಅದೇ ರೀತಿಯ ಆರೋಪಗಳು  ಅಬಕಾರಿ ಮತ್ತು ಮೋಟಾರು ವಾಹನ ಇಲಾಖೆಯ ಕೆಲವು ನೌಕರರ ಮೇಲೂ ಉಂಟಾಗಿದೆ. ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರಕಾರ ಆದೇಶ ನೀಡಿದ್ದು, ಅದರಂತೆ ಕಣ್ಣೂರು ಕ್ರೈಮ್ ಬ್ರಾಂಚ್ ಎಸ್.ಪಿ. ಮತ್ತು ಡಿವೈಎಸ್ಪಿಯವರ ನೇತೃತ್ವದ ವಿಶೇಷ ತಂಡ  ತನಿಖೆ ಆರಂಭಿಸಿದೆ.

NO COMMENTS

LEAVE A REPLY