ಮರದಿಂದ ಬಿದ್ದು ಮೃತ್ಯು

0
24

ಬಂದಡ್ಕ: ಬಂದಡ್ಕ ಸಮೀಪದ ಕೊಟ್ಯೋಡಿ ಚೀಮುಳ್ಳಡ್ಕದ ದೇವಪ್ಪ ಎಂಬವರ ಪುತ್ರ ಎಂ.ಡಿ. ಶಿಬು (೪೦) ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಚುಳ್ಳಿಕ್ಕೆರೆಯ ಚೇಟುಕಲ್ಲಿನ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿರುವ ಹುಣಸೆ ಕಾಯಿ ಕೊಯ್ಯಲೆಂದು ಶಿಬು ನಿನ್ನೆ ಬೆಳಿಗ್ಗೆ ಮರವೇರಿದ್ದಾಗ ಕಾಲು ಜಾರಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

NO COMMENTS

LEAVE A REPLY