ಅನಧಿಕೃತ ಮದ್ಯ ಮಾರಾಟ: ಇಬ್ಬರ ಸೆರೆ

0
28

ಮುಳ್ಳೇರಿಯ: ಅನಧಿಕೃತ ಮದ್ಯ ಮಾರಾಟದ ವಿರುದ್ಧ ದಾಳಿ ತೀವ್ರಗೊಳಿಸಿರುವ ಅಬಕಾರಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿ   ಮದ್ಯ  ನಾಶಪಡಿಸಿದ್ದಾರೆ. ನಾರಂಪಾಡಿ ಸಮೀಪದ ನೆಲ್ಲಿಯಡ್ಕ ದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಮಿಲ್ಲಿ ಲೀಟರ್‌ನ ೨೧ ಬಾಟಲಿ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಬದಿಯ ಡ್ಕ, ಕುಂಡಂಕುಳಿ ನಿವಾಸಿ ಶಿವಪ್ರಸಾದ್ (೩೨)ನನ್ನು ಬಂಧಿಸಲಾಗಿದೆ.

ಬೀಜದಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಮಿಲ್ಲಿ ಲೀಟರ್‌ನ ೩೦ ಬಾಟಲಿ ಪಾಂಡಿ ಚೇರಿ ನಿರ್ಮಿತ ವಿದೇಶ ಮದ್ಯ ಸಹಿತ ಇಲ್ಲಿನ ನಿವಾಸಿ ಐತ್ತಪ್ಪ ನಾಯ್ಕ (೩೬)ನನ್ನು ಬಂಧಿಸಲಾಗಿದೆ. ಅಬಕಾರಿ ಇನ್‌ಸ್ಪೆಕ್ಟರ್ ರಂಜಿತ್ ಬಾಬು  ನೇತೃತ್ವದಲ್ಲಿ ದಾಳಿ ನಡೆದಿದೆ.

NO COMMENTS

LEAVE A REPLY