ಹೆದ್ದಾರಿ ಶಾಲೆ ಮೆನೇಜರ್ ನಿಧನ

0
24

ಪೈವಳಿಕೆ: ಮುಳಿಗದ್ದೆ ಹೆದ್ದಾರಿ ಎಯುಪಿ ಶಾಲೆ ಮೆನೇಜರ್  ಬಾಯಾರು ನಿಡುವಜೆ ನಿವಾಸಿ ಎನ್. ರಾಮಕೃಷ್ಣ ಭಟ್ (೮೧) ನಿನ್ನೆ ರಾತ್ರಿ ನಿಧನಹೊಂದಿದರು. ಅಸೌಖ್ಯನಿಮಿತ್ತ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ ದಾಖಲಾಗಿದ್ದರು.  ನಾಟಕ ಕಲಾವಿದರಾಗಿದ್ದ ಇವರು ದಳಿಕುಕ್ಕು ಶ್ರೀ ಪಂಚಲಿಂಗೇಶ್ವರ ಎಎಲ್‌ಪಿ ಶಾಲೆಯಿಂದ ಅಧ್ಯಾಪಕರಾಗಿ ನಿವೃತ್ತರಾಗಿದ್ದರು.

ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಗಣೇಶ್, ರಾಜೇಶ್, ಮಹೇಶ್, ಸೊಸೆಯಂದಿರಾದ ಸುನಿತಾ, ಮಮತಾ, ಲೀನಾ, ಸಹೋದರರಾದ ಶ್ಯಾಮ ಭಟ್, ಶಿವರಾಮ ಭಟ್,  ಸಹೋದರಿ ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರರಾದ ಸುಬ್ರಹ್ಮಣ್ಯ ಭಟ್, ಗೋಪಾಲಕೃಷ್ಣ ಭಟ್, ಸಹೋದರಿ ಗಂಗಮ್ಮ ಈ ಹಿಂದೆಯೇ ನಿಧನಹೊಂದಿದ್ದಾರೆ.

NO COMMENTS

LEAVE A REPLY