ಚೂರಿಪಳ್ಳ ಮನೆ ಕಳವು: ಈ ಹಿಂದೆ ನಡೆದ ಕಳವು ಪ್ರಕರಣಗಳ ಆರೋಪಿಗಳನ್ನು ಕೇಂದ್ರೀಕರಿಸಿ ತನಿಖೆ

0
21

ಬದಿಯಡ್ಕ: ನೆಲ್ಲಿಕಟ್ಟೆ ಬಳಿಯ ಚೂರಿಪಳ್ಳದಲ್ಲಿ ದಿ|ಬೀರಾನ್ ಹಾಜಿ ಎಂಬವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ತನಿಖೆ ತೀವ್ರಗೊಳಿ ಸಲಾಗಿದ್ದು, ಆರೋಪಿಯ ಪತ್ತೆಗೆ ಕ್ರಮ ಊರ್ಜಿತಗೊಳಿಸಲಾ ಗಿದೆಯೆಂದು ಬದಿಯಡ್ಕ ಠಾಣೆ ಪೊಲೀಸರು ತಿಳಿಸಿದ್ದಾರೆ. ದರೋಡೆ ನಡೆದ ಮನೆಗೆ ನಿನ್ನೆ ಅಪರಾಹ್ನ ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಆದರೆ ದರೋಡೆ ಕೋರನ ಬೆರಳಚ್ಚು ಪತ್ತೆಹಚ್ಚಲಾಗಿಲ್ಲ. ಬೈಕ್ ಚಲಾಯಿಸುವಾಗ  ಧರಿಸುವ ಕೈಕವಚವನ್ನು ದರೋಡೆಕೋರ  ಬಳಸಿಕೊಂಡಿದ್ದನೆಂದು ಹೇಳಲಾಗುತ್ತಿದ್ದು, ಕೈಕವಚ ಬಳಸಿದರೆ ಬೆರಳಚ್ಚು ಪತ್ತೆ ಹಚ್ಚಲು ಅಸಾಧ್ಯವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠ ಡಾ. ಎ. ಶ್ರೀನಿವಾಸ್  ನಿನ್ನೆ ಮನೆಗೆ ಭೇಟಿ ನೀಡಿ ಅವಲೋಕನ ನಡೆಸಿದ್ದಾರೆ. ದರೋಡೆಕೋರನನ್ನು ಪತ್ತೆಹಚ್ಚಲು ಬೇಕಾದ ಪುರಾವೆಗಳನ್ನು ಪೊಲೀಸರು ಸಂಗ್ರಹಿಸಿಕೊಂಡಿದ್ದಾರೆ. ಮನೆಯೊಳಗೆ ನುಗ್ಗಿ ಆಕ್ರಮಿಸಿ ಚಿನ್ನಾಭರಣ ದರೋಡೆ ನಡೆಸಿರುವುದು ಒಬ್ಬನೇ ವ್ಯಕ್ತಿಯೆಂದು ಮನೆಯವರು ತಿಳಿಸುತ್ತಿದ್ದಾರೆ. ಆದರೆ ಈಕೃತ್ಯದಲ್ಲಿ ಒಬ್ಬನಿಗಿಂತ ಹೆಚ್ಚು ಮಂದಿ ಭಾಗಿಯಾಗಿರಬಹುದು ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು, ದರೋಡೆ ಪ್ರಕರಣ ಗಳಲ್ಲಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡು ಗಡೆಗೊಂಡ ವರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಮುಂಜಾನೆ ೩ ಗಂಟೆ ವೇಳೆ ಮನೆಯ ಕಿಟಿಕಿ ಮುರಿದು ಒಳನುಗ್ಗಿದ ದರೋಡೆಕೋರ ಮನೆಯೊಡತಿ ಆಮಿನ(೫೨), ಸೊಸೆ ಮರಿಯಾಂಬಿ(೨೫) ಇವರ ಮಗು ಮೊಹಮ್ಮದ್ ಆದಿ(೨) ಎಂಬವರಿಗೆ ಇರಿದು ಗಾಯಗೊಳಿಸಿದ್ದಾನೆ. ಬಳಿಕ ಕೊಲೆಗೈಯ್ಯುವುದಾಗಿ  ಬೆದರಿಕೆಯೊಡ್ಡಿ ಚಿನ್ನಾಭರಣ ದರೋಡೆ  ನಡೆಸಿದ್ದಾನೆ. ಚಿನ್ನದ ಬಳೆ, ಎರಡು ಸರ, ವಾಚ್ ಎಂಬಿವುಗಳ ಸಹಿತ ೧೦ ಪವನ್ ಚಿನ್ನಾಭರಣ ದರೋಡೆ ನಡೆಸಿರುವು ದಾಗಿ ಮನೆಯವರು ದೂರಿದ್ದಾರೆ. ಮನೆಯವರು ನೀಡಿದ ಹೇಳಿಕೆಯನ್ನು ಆಧರಿಸಿ ತನಿಖೆ ಮುಂದುವರಿಸುತ್ತಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಬೈಕ್‌ನಲ್ಲಿ ತಲುಪಿ ಈ ಕೃತ್ಯ ನಡೆಸಿ ಪರಾರಿಯಾಗಿರಬಹುದೆಂದೂ ಅಂದಾಜಿಸಲಾಗಿದೆ.

NO COMMENTS

LEAVE A REPLY