ಡಿವೈಎಸ್ಪಿ ಕಚೇರಿ ಮಾರ್ಚ್: ಶೋಭಾ ಸುರೇಂದ್ರನ್ ಸಹಿತ ೨೪ ಮಂದಿಗೆ ಜುಲ್ಮಾನೆ

0
23

ಕಾಸರಗೋಡು: ಪೊಲೀಸರ ಅನುಮತಿ ಪಡೆಯದೆ ಹೊಸದುರ್ಗ ಡಿವೈಎಸ್ಪಿ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರ ನ್, ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸೇರಿದಂತೆ ೨೪ ಮಂದಿ ಬಿಜೆಪಿ ಕಾರ್ಯಕರ್ತರಿಗೆ ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ತಲಾ ೧೧೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಕಳೆದ ಅಗೋಸ್ತು ೧೫ರಂದು ಮಾವುಂಗಾಲ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸು ದಾಖಲಿಸಿ ನಿರಪರಾಧಿಗಳನ್ನು ಬಂಧಿಸಲಾಗಿದೆ ಎಂದು ಆರೋಪಿ ಬಿಜೆಪಿ ನೇತೃತ್ವದಲ್ಲಿ ಹೊಸದುರ್ಗ ಡಿವೈಎಸ್ಪಿ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಾಗಿತ್ತು. ಅದರಲ್ಲಿ ಶೋಭಾ ಸುರೇಂದ್ರನ್, ಶ್ರೀಕಾಂತ್ ಸೇರಿದಂತೆ ಹಲವು ನೇತಾರರು ಮತ್ತು ಕಾರ್ಯಕರ್ತರು ಭಾಗವಹಿಸಿ ದ್ದಾರೆ. ಅದಕ್ಕೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂ ಡಿದ್ದರು. ಅದಕ್ಕೆ ಸಂಬಂಧಿಸಿ ಅವರಿಗೆ ನ್ಯಾಯಾಲಯ ಜುಲ್ಮಾನೆ ವಿಧಿಸಿದೆ.

NO COMMENTS

LEAVE A REPLY