ಯುವಕನಿಗೆ ಹಲ್ಲೆ: ಕೇಸು ದಾಖಲು

0
27

ಮಂಜೇಶ್ವರ: ಮಂಜೇಶ್ವರ ಕಡಪ್ಪುರ ನಿವಾಸಿ ಸೈದು ಎಂಬವರ ಪುತ್ರ ಅಬ್ದುಲ್ ಗಫೂರ್(೩೨)ಗೆ ಹಲ್ಲೆಗೈದ ಆರೋಪದಂತೆ ಹೊಸಂಗಡಿ ಬಳಿಯ ರಾಮತ್ತಲ್ ನಿವಾಸಿ ಸುನೈಫ್ ವಿರುದ್ಧ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೪ರಂದು ರಾತ್ರಿ ೧೧.೩೦ಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಅಬ್ದುಲ್ ಗಫೂರ್‌ನನ್ನು ಹೊಸಂಗಡಿ ರೈಲ್ವೇ ಗೇಟ್ ಬಳಿ ತಡೆದು ನಿಲ್ಲಿಸಿ ಆಕ್ರ ಮಿಸಿರುವುದಾಗಿ ದೂರಲಾಗಿದೆ.  ಹೊಯ್ಗೆ ಸಾಗಾಟ ಬಗ್ಗೆ ಮಾಹಿತಿ ನೀಡಿದ ದ್ವೇಷವೇ ಹಲ್ಲೆಗೆ ಕಾರಣ ವೆಂದೂ ದೂರಲಾ ಗಿದೆ. ಗಾಯಾಳು ವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

NO COMMENTS

LEAVE A REPLY