ಎಣ್ಮಕಜೆ ಪಂಚಾಯತ್ ಉಪಾಧ್ಯಕ್ಷ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅಂಗೀಕಾರ

0
22

ಪೆರ್ಲ: ಎಣ್ಮಕಜೆ ಪಂಚಾಯತ್‌ನಲ್ಲಿ ಉಪಾಧ್ಯಕ್ಷ ಬಿಜೆಪಿಯ ಕೆ. ಪುಟ್ಟಪ್ಪರ ವಿರುದ್ಧ ಯುಡಿಎಫ್ ಮಂಡಿಸಿದ ಅವಿಶ್ವಾಸ ಗೊತ್ತುವಳಿಯಲ್ಲಿ ಅಂಗೀಕಾರಗೊಂಡಿದೆ. ಇದರಿಂದ ಪಂ.ನಲ್ಲಿ ಬಿಜೆಪಿಗೆ ಆಡಳಿತ ನಷ್ಟಗೊಂಡಿತು.

ಪಂ. ಉಪಾಧ್ಯಕ್ಷರ ವಿರುದ್ಧ ಮುಸ್ಲಿಂಲೀಗ್ ಸದಸ್ಯ ಸಿದ್ದಿಕ್ ವಳಮೊಗರು ಅವಿಶ್ವಾಸ ಗೊತ್ತುವಳಿ ನೋಟೀಸು ನೀಡಿದ್ದಾರೆ.  ಇಂದು ಬೆಳಿಗ್ಗೆ ಚರ್ಚೆಯ ಬಳಿಕ ಮತದಾನ ನಡೆಯಿತು. ಈ ವೇಳೆ ಅವಿಶ್ವಾಸ ಗೊತ್ತುವಳಿ ಪರ ೧೦ ಮತಗಳು, ವಿರುದ್ಧವಾಗಿ ೭ ಮತಗಳು ಲಭಿಸಿವೆ. ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್.ಭಟ್ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿಯೂ ಅಂಗೀಕಾರಗೊಂಡಿತ್ತು. ರೂಪವಾಣಿ ಆರ್. ಭಟ್ ವಿರುದ್ಧ ಕಾಂಗ್ರೆಸ್ ಸದಸ್ಯೆ ವೈ. ಶಾರದಾ ಅವಿಶ್ವಾಸ ಗೊತ್ತುವಳಿಗೆ ನೋಟೀಸು ನೀಡಿದ್ದರು. ಇದರಂತೆ ನಿನ್ನೆ ಪಂಚಾಯತ್ ಸಭಾಂಗಣದಲ್ಲಿ ಚರ್ಚೆ ನಡೆದಿದೆ. ಬಳಿಕ ನಡೆದ ಮತದಾನದಲ್ಲಿ ಅವಿಶ್ವಾಸ ಗೊತ್ತುವಳಿ ಪರವಾಗಿ ಹತ್ತು ಮಂದಿ, ವಿರೋಧಿಸಿ ಏಳು ಮಂದಿ ಮತ ಚಲಾಯಿಸಿದ್ದರು. ಪ್ರಸ್ತುತ ಪಂಚಾಯತ್‌ನಲ್ಲಿ ೧೭ ಮಂದಿ ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿಗೆ ಏಳು, ಯುಡಿಎಫ್‌ಗೆ ಏಳು, ಎಲ್‌ಡಿಎಫ್‌ಗೆ ಮೂವರು ಸದಸ್ಯರಿದ್ದಾರೆ. ಯುಡಿಎಫ್‌ನಲ್ಲಿ  ಕಾಂಗ್ರೆಸ್‌ಗೆ ನಾಲ್ಕು ಮಂದಿ, ಮುಸ್ಲಿಂ ಲೀಗ್‌ಗೆ ಮೂರು ಮಂದಿ ಸದಸ್ಯರಿದ್ದಾರೆ. ಅದೇ ರೀತಿ ಎಲ್‌ಡಿಎಫ್‌ನಲ್ಲಿ ಸಿಪಿಎಂಗೆ ಇಬ್ಬರು, ಸಿಪಿಐಗೆ ಓರ್ವ ಸದಸ್ಯರಿದ್ದಾರೆ. ಅವಿಶ್ವಾಸ ಗೊತ್ತುವಳಿಯ ಮತದಾನ ವೇಳೆ ಎಲ್‌ಡಿಎಫ್‌ನ ಮೂವರು ಸದಸ್ಯರು ಯುಡಿಎಫ್‌ನ್ನು ಬೆಂಬಲಿಸಿದ್ದರು.

NO COMMENTS

LEAVE A REPLY