ಸಿಪಿಎಂ ಏರಿಯಾ ಕಾರ್ಯದರ್ಶಿಗೆ ವಾಟ್ಸಪ್ ಗ್ರೂಪ್ನಲ್ಲಿ ಬೆದರಿಕೆ: ಇಬ್ಬರ ವಿರುದ್ಧ ಕೇಸು

0
20

ಮಂಜೇಶ್ವರ: ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಚಿಪ್ಪಾರ್ ರಜಾಕ್‌ರಿಗೆ ವಾಟ್ಸಪ್ ಗ್ರೂಪ್‌ನಲ್ಲಿ ಅಪಮಾನ ಹಾಗೂ ಬೆದರಿಕೆ ಸಂದೇಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ನಿವಾಸಿಗಳಾದ ಮಕ್‌ಬುಲ್ ಅಹಮ್ಮದ್ ಹಾಗೂ  ಅಬ್ದುಲ್ ಶರೀಕ್ ಎಂಬವರ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಲೆಫ್ಟ್ ಅಲೈನ್ಸ್ ಉಪ್ಪಳ ಹೆಸರಿನ ಗ್ರೂಪ್‌ನಲ್ಲಿ ಹಲವು ಸಮಯಗಳಿಂದ ಈ ಸಂದೇಶ ಬರುತ್ತಿದ್ದು, ಈ ಬಗ್ಗೆ ರಜಾಕ್ ಚಿಪ್ಪಾರ್ ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY