ರಸ್ತೆಯಲ್ಲಿ ಹೊಂಡ: ಬಸ್ನಿಂದ ಹೊರಕ್ಕೆಸೆಯಲ್ಪಟ್ಟು ಪ್ರಯಾಣಿಕನಿಗೆ ಗಾಯ

0
22

ಬದಿಯಡ್ಕ: ಹೊಂಡಗಳು ತುಂಬಿಕೊಂಡಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌ನಿಂದ ಹೊರಕ್ಕೆಸೆಯಲ್ಪಟ್ಟು ಪ್ರಯಾಣಿಕ ಗಾಯಗೊಂಡ ಘಟನೆ ನಡೆದಿದೆ.

ನೆಲ್ಲಿಕಟ್ಟೆ ಬಳಿಯ ಗುರುನಗರದಲ್ಲಿ ನಿನ್ನೆ ಈ ಘಟನೆ ನಡೆದಿದೆ.  ನೆಲ್ಲಿಕಟ್ಟೆ ಬಳಿಯ ಚರ್ಲಡ್ಕ ನಿವಾಸಿ ದೇವಸ್ಯ(೫೬) ಎಂಬವರು ಬಸ್‌ನಿಂದ ಬಿದ್ದು ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರ ಒಂದು ಹಲ್ಲು ಉದುರಿರುವುದಾಗಿ ಹೇಳಲಾಗುತ್ತಿದೆ. ಕಾಸರಗೋಡಿನಿಂದ ಪುತ್ತೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗೆ  ದೇವಸ್ಯ ಚರ್ಲಡ್ಕದಿಂದ ಹತ್ತಿದ್ದರು. ಬಸ್ ರಸ್ತೆಯ ಹೊಂಡಗಳಿಗೆ ಬಿದ್ದು ಏಳುತ್ತಾ ಸಾಗುತ್ತಿದ್ದಾಗ ಹಿಂಬದಿ ಬಾಗಿಲ ಬಳಿ ನಿಂತಿದ್ದ ದೇವಸ್ಯ ಹೊರಕ್ಕೆಸೆಯಲ್ಪಟ್ಟರೆನ್ನಲಾಗಿದೆ.

NO COMMENTS

LEAVE A REPLY