ಅಬೂಬಕರ್ ಸಿದ್ದಿಕ್ ಕೊಲೆ ಪ್ರಕರಣ: ಆರೋಪಿಗಳನ್ನು ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ತೆಗೆಯಲು ಅರ್ಜಿ

0
24

ಕಾಸರಗೋಡು: ಸಿಪಿಎಂ ಕಾರ್ಯಕ ರ್ತ ಉಪ್ಪಳ ಸೋಂಕಾಲ್ ಪ್ರತಾಪನಗರದ ಅಬೂಬಕರ್ ಸಿದ್ದಿಕ್(೨೪)ರನ್ನು ಕೊಲೆಗೈದ ಪ್ರಕರಣದ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನದಿಂದ ಮತ್ತೆ ವಶಕ್ಕೆ ತೆಗೆದುಕೊ ಳ್ಳಲು ತನಿಖಾ ತಂಡ ತೀರ್ಮಾನಿಸಿದೆ.

ಉಪ್ಪಳ ಸೋಂಕಾಲ್ ಅಶ್ವತಿ ನಿವಾಸದ ಕೆ.ವಿ.ಅಶ್ವಿತ್(೩೬), ಶಾಂತಿಗುರಿಯ ಎಸ್. ಕಾರ್ತಿಕ್(೩೦) ಈ ಪ್ರಕರಣದ ಆರೋಪಿಗಳಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿದ್ದಾರೆ. ಅಬೂಬಕರ್ ಸಿದ್ದಿಕ್‌ರ ಕೊಲೆ ಹಿಂದೆ ಒಳಸಂಚು ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವು ದೆಂದು ಪೊಲೀಸರು ತಿಳಿಸಿದ್ದಾರೆ.

ಆಗೋಸ್ತು ೫ರಂದು ರಾತ್ರಿ ಸೋಂಕಾ ಲುನಲ್ಲಿ ಅಬೂಬಕರ್ ಸಿದ್ಧಿಕ್‌ರನ್ನು ಇರಿದು ಕೊಲೆಗೈಯ್ಯಲಾಗಿತ್ತು. ಆ ವೇಳೆ ಅವರ ಜತೆಗಿದ್ದ ಸ್ನೇಹಿತರಾದ ಮೂವರನ್ನು ಪೊಲೀಸರು ಈ ಪ್ರಕರಣದ ಪ್ರಧಾನ ಸಾಕ್ಷಿಗಳನ್ನಾಗಿ ಸಿದ್ದಾರೆ. ಆ ಪ್ರದೇಶದಲ್ಲಿ ಪೊಲೀಸರು ಚಾಕುವೊಂದನ್ನು ಪತ್ತೆಹಚ್ಚಿದ್ದು, ಅದನ್ನೇ ಕೊಲೆಗೆ ಬಳಸಲಾಗಿತ್ತೆಂದು ಫೋರೆನ್ಸಿಕ್ ಸರ್ಜನ್ ನಡೆಸಿದ ರಾಸಾಯನಿಕ ಪರೀಕ್ಷೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ಕರೆಗಳ ಮಾಹಿತಿಗ ಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕೊಲೆಯ ಮೊದಲು ಮತ್ತು ಕೊಲೆ ಬಳಿಕ ಆರೋಪಿಗಳು ಮಾಡಿದ ಎಲ್ಲಾ ಫೋನ್ ಕರೆಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಡಿವೈಎಸ್ಪಿ ಎಂ.ವಿ. ಸುಕುಮಾರನ್‌ರ  ನೇತೃತ್ವದ ವಿಶೇಷ ಪೊಲೀಸ್ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

NO COMMENTS

LEAVE A REPLY