ರೈತ ಸಂಘದಿಂದ ಪ್ರಧಾನ ಅಂಚೆಕಚೇರಿಗೆ ಮಾರ್ಚ್, ಧರಣಿ

0
16

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ರೈತ ಸಂಘದ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕಾಸರಗೋಡು ಪ್ರಧಾನ ಅಂಚೆಕಚೇರಿಗೆ ಮಾರ್ಚ್ ನಡೆಯಿತು. ಬಳಿಕ ಆರಂಭಗೊಂಡ ಧರಣಿಯನ್ನು ಸಂಸದ  ಪಿ. ಕರುಣಾಕರನ್ ಉದ್ಘಾಟಿಸಿದರು. ಧರಣಿ ಇಂದು ರಾತ್ರಿ ೮ ಗಂಟೆವರೆಗೆ ಮುಂದುವರಿಯಲಿದೆ.

ಕೇಂದ್ರ ಸರಕಾರ ಕೃಷಿ ಸಾಲಗಳನ್ನು ಮನ್ನಾಗೊಳಿಸಬೇಕು, ಸ್ವಾಮಿನಾಥನ್ ಆಯೋಗದ ವರದಿಯನ್ನು ಜ್ಯಾರಿಗೊಳಿಸಬೇಕು, ಕಡಿತಗೊಳಿಸಿದ ರೇಶನ್ ಸಾಮಗ್ರಿ ಹೆಚ್ಚಿಸಬೇಕು, ರಬ್ಬರ್‌ಗೆ ಕಿಲೋಗೆ ೨೫೦ ರೂಪಾಯಿ ನಿಗದಿಪಡಿಸ ಬೇಕು, ರಬ್ಬರ್ ಕೃಷ್ಯುತ್ಪನ್ನವಾಗಿ ಪರಿಗಣಿಸಬೇಕು, ರಬ್ಬರ್ ಆಮದು ತಡೆಯಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಚಳವಳಿ ನಡೆಸಲಾಗುತ್ತಿದೆ.

NO COMMENTS

LEAVE A REPLY