ಮಂಗಲ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ

0
32

ಉಪ್ಪಳ: ಮಂಗಲ್ಪಾಡಿ ಸರಕಾರಿ ಹೈಸ್ಕೂಲ್(ಕುಕ್ಕಾರು)ನಲ್ಲಿ ಕನ್ನಡ ವಿಭಾಗದಲ್ಲಿ ಕನ್ನಡ ಭಾಷೆಯ ಜ್ಞಾನವಿಲ್ಲದ ಮಲಯಾಳಿ ಗಣಿತ ಅಧ್ಯಾಪಕನನ್ನು ನೇಮಕಗೊಳಿಸಿರುವು ದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಶಾಲೆಯಲ್ಲಿ ಇಂದು ಬೆಳಿಗ್ಗೆ ೯ರಿಂದ ಸಂಜೆ ೪ ಗಂಟೆಯ ತನಕ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.  ಜಿಲ್ಲಾ ಪಂ. ಪಿಡಬ್ಲ್ಯುಡಿ ವಿಭಾಗ ಸ್ಥಾಯಿ ಸಮಿತಿ ಚಯರ್‌ಪರ್ಸನ್ ಫರೀದ ಜಕೀರ್ ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಬಾಲಕೃಷ್ಣ ಅಂಬಾರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಎ. ಮಹಾಲಿಂಗೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ, ಕ.ಸಾ.ಪ. ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ. ಭಟ್, ಗೋಪಾಲ ಶೆಟ್ಟಿ ಅರಿಬೈಲು, ಹರ್ಷಾದ್ ವರ್ಕಾಡಿ, ವಿಜಯಕುಮಾರ್ ರೈ, ದಿನೇಶ್ ಚೆರುಗೋಳಿ, ರವೀಂದ್ರ ಶೆಟ್ಟಿ ಹೇರೂರು, ಸತ್ಯವತಿ ಚೆರುಗೋಳಿ ಭಾಗವಹಿಸಿದರು. ಕನ್ನಡ ವಿಭಾಗಕ್ಕೆ ಮಲಯಾಳ ಅಧ್ಯಾಪಕರನ್ನು ನೇಮಿಸಿದ ಕ್ರಮವನ್ನು ಪ್ರತಿಭಟಿಸಿ ಈಗಾಗಲೇ ಶಾಲೆಯಲ್ಲಿ ಪ್ರತಿಭಟನೆ ಹಾಗೂ ಡಿ.ಡಿ.ಇ ಕಚೇರಿಗೆ  ಮುತ್ತಿಗೆ ಚಳವಳಿ ನಡೆಸಿದ್ದರೂ ಇದರಿಂದ ಯಾವುದೇ ಸೂಕ್ತ ಕ್ರಮಕೈಗೊಳ್ಳದಿರುವುದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

 

NO COMMENTS

LEAVE A REPLY