ಓಣಂ, ಬಕ್ರೀದ್ ಸಂತೆ ಉದ್ಘಾಟನೆ

0
17

ಕಾಸರಗೋಡು: ಸಪ್ಲೈಕೋ ನೇತೃತ್ವದಲ್ಲಿ ನಡೆಯುವ ಓಣಂ, ಬಕ್ರೀದ್ ಸಂತೆಯ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು ಬೆಳಿಗ್ಗೆ ಕಾಸರ ಗೋಡಿನಲ್ಲಿ ನಡೆಯಿತು. ಕಾಸರ ಗೋಡು ಎಂ.ಜಿ. ರಸ್ತೆಯ ವಿ.ಪಿ. ಟವರ್‌ನಲ್ಲಿ ಸಂತೆ ಕಾರ್ಯಾಚರಿ ಸಲಿದೆ. ಕುಟುಂಬಶ್ರೀ ಸಾಫ್, ಮಿಲ್ಮಾ, ಕಯರ್‌ಫೆಡ್ ಎಂಬಿವುಗಳ ಉತ್ಪನ್ನಗಳ ಜತೆಗೆ ಎಲ್ಲಾ ತರದ ನಿತ್ಯೋಪಯೋಗಿ ಸಾಮಗ್ರಿಗಳೂ ಸಂತೆಯಲ್ಲಿರುವುದು. ಹದಿನೈದು ದಿನಗಳ ಕಾಲ ನಡೆಯುವ ಸಂತೆಯಲ್ಲಿ  ದಿನಂಪ್ರತಿ ಚೀಟಿ ಎತ್ತುವ ಮೂಲಕ ಬಹುಮಾನ ಯೋಜನೆ ಯನ್ನೂ ಹಮ್ಮಿಕೊಳ್ಳಲಾಗುವುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಸಹಿತ ಹಲವರು ರಾಜಕೀಯ ನೇತಾರರು, ಅಧಿಕಾರಿ ಗಳು ಉಪಸ್ಥಿತರಿದ್ದರು.

ಆಮಂತ್ರಣ ಮಲಯಾಳದಲ್ಲಿ ಮಾತ್ರ

ಸಂತೆ ಉದ್ಘಾಟನೆ ಬಿಜೆಪಿ ಬಹಿಷ್ಕಾರ

ಕಾಸರಗೋಡು: ಕಾಸರಗೋಡು ನಗರದಲ್ಲಿ ಇಂದು ಬೆಳಿಗ್ಗೆ ನಡೆದ ಓಣಂ, ಬಕ್ರೀದ್ ಸಂತೆಯ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿ ಸಿದೆ. ಸಂತೆ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಮಲಯಾಳದಲ್ಲಿ ಮಾತ್ರ ಪ್ರಕಟಿಸಿದ್ದು, ಕನ್ನಡವನ್ನು ಅವಗಣಿಸಲಾ ಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ನೇತೃತ್ವದಲ್ಲಿ ಕಾರ್ಯಕ್ರಮವನ್ನು ಬಹಿಷ್ಕರಿಸಲಾಗಿದೆ. ಇತ್ತೀಚೆಗೆ ನಡೆದ ಆರ್‌ಡಿಒ ಕಚೇರಿಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಕೂಡಾ ಕನ್ನಡದಲ್ಲಿ ಪ್ರಕಟಿಸದಿರುವುದನ್ನು ಪ್ರತಿಭಟಿಸಿ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿಸಿತ್ತು.

NO COMMENTS

LEAVE A REPLY