ಪ್ರಳಯಕ್ಕೆ ಕೇರಳ ತತ್ತರ: ಸಾವಿನ ಸಂಖ್ಯೆ ೨೫ಕ್ಕೆ

0
34

ತಿರುವನಂತಪುರ: ರಾಜ್ಯದಲ್ಲಿ ಮಳೆ ರೌದ್ರತಾಂಡವ ಇಂದೂ  ಮುಂದುವರಿ ಯುತ್ತಿದ್ದು ಅದರಿಂದ ಸೃಷ್ಟಿಯಾದ ಮಹಾಪ್ರಳಯಕ್ಕೆ ಕೇರಳವೇ ತತ್ತರಗೊಂಡಿದೆ.

ಧಾರಾಕಾರ ಮಳೆಗೆ ಇಡುಕ್ಕಿ, ಮಲಪ್ಪುರಂ, ಕಲ್ಲಿಕೋಟೆ, ವಯನಾಡು, ಪಾಲ್ಘಾಟ್ ಮತ್ತು ಕಣ್ಣೂರು ಜಿಲ್ಲೆಗಲ್ಲಿ ಅತೀ ಹೆಚ್ಚು ಅನಾಹುತ ಸೃಷ್ಟಿಸಿದ್ದು, ಈ ಜಿಲ್ಲೆಗಳಲ್ಲಿ ೨೪ ಮಂದಿಯ ಪ್ರಾಣ ಅಪಹರಿಸಿದೆ. ಇದರ ಹೊರತಾಗಿ ತಿರುವನಂತಪುರದಲ್ಲಿ ಮಳೆಗೆ ಯುವಕನೋರ್ವ ಬಲಿಯಾಗಿದ್ದಾನೆ.

ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಸೇನಾ ಪಡೆಯನ್ನು ಕರೆಸಲಾಗಿದೆ. ದುರಂತ ಪರಿಹಾರ ಪಡೆ, ಪೊಲೀಸ್, ಅಗ್ನಿಶಾಮಕ ದಳದವರು  ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಮಳೆ ಸೃಷ್ಟಿಸಿದ ಪ್ರಾಕೃತಿಕ ದುರಂತಕ್ಕೆ ಇಡುಕ್ಕಿ ಜಿಲ್ಲೆಯಲ್ಲಿ ಮಾತ್ರವಾಗಿ ೧೧ ಮಂದಿ, ಮಲಪ್ಪುರಂ ಜಿಲ್ಲೆಯಲ್ಲಿ ಒಂದೇ ಕುಟುಂಬದ ೫ ಮಂದಿ, ವಯನಾಡು ಜಿಲ್ಲೆಯಲ್ಲಿ ಮೂರು, ಮೂವಾಟ್ಟುಪು ಳದಲ್ಲಿ ಇಬ್ಬರು, ಕಲ್ಲಿಕೋಟೆ ಮತ್ತು ತಿರುವನಂತಪುರ ಜಿಲ್ಲೆಯಲ್ಲಿ ತಲಾ ಓರ್ವರಂತೆ ಪ್ರಾಣ ಅಪಹರಿಸಿದೆ.

ರಾಜ್ಯದ ದೊಡ್ಡ ಇಡುಕ್ಕಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಈಗ ೨೪೦೧.೧ ಅಡಿಗೇರಿದೆ. ಅಣೆಕಟ್ಟಿನಲ್ಲಿ ನೀರು ದಾಸ್ತಾನಿನ ಒಟ್ಟು ಸಾಮರ್ಥ್ಯ ೨೪೦೩ ಅಡಿಯಾಗಿದೆ. ಈ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕೆಲವೇ ನಿಮಿಷಗಳಲ್ಲಿ ೨೪೦೩ ಅಡಿ ಗೇರುವ ಸಾಧ್ಯತೆ ಇದೆ. ಅದು ಭಾರೀ ಅಪಾಯಕ್ಕೂ ದಾರಿ ಮಾಡಿಕೊಡಲಿದೆ. ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ ಮೂರು ಶಟರ್‌ಗಳನ್ನು ತೆರೆದಿದ್ದು, ಪ್ರತೀ ಸೆಕೆಂಡಿಗೆ ಒಂದೂಕಾಲು ಲಕ್ಷ ಲೀಟರ್ ನೀರು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀರಿನ ಹೊರಬಿಡುವಿಕೆಯನ್ನು ಇಂದಿನಿಂದ ಸೆಕೆಂಡಿಗೆ ಮೂರು ಲಕ್ಷ ಲೀಟರ್‌ಗೇರಿಸಲು ತೀರ್ಮಾನಿಸಲಾಗಿದೆ. ಈ ಅಣೆಕಟ್ಟಿನ ನೀರು ತೆರೆದು ಬಿಡುತ್ತಿರುವುದು ೨೬ ವರ್ಷಗಳ ಬಳಿಕ ಇದು ಪ್ರಥಮವಾಗಿದೆ.

ಇಡುಕ್ಕಿ ಜಿಲ್ಲೆಯ ಪ್ರವಾಸಿ ಕೇಂದ್ರವಾದ ಮೂನಾರ್‌ನಲ್ಲಿ ಭೂಕುಸಿತ ಉಂಟಾಗಿದ್ದು, ಅಲ್ಲಿ ವಿದೇಶಿಯರೂ ಸೇರಿದಂತೆ ೩೦ ಮಂದಿ ಸಿಲುಕಿಕೊಂಡಿ ದ್ದಾರೆ. ಅವರನ್ನು ರಕ್ಷಿಸುವ ಕ್ರಮ ಕೈಗೊಳ್ಳಲಾಗಿದೆ. ಧಾರಾಕಾರ ಮಳೆಯಿಂದ ರಾಜ್ಯದ ೨೪ ಅಣೆಕಟ್ಟುಗಳ ಶಟರ್‌ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ. ಪ್ರಾಕೃತಿಕ ವಿಕೋಪ ಸೃಷ್ಟಿಸಿದ ದುರಂತಗಳು ಮತ್ತು ಅದನ್ನು ಎದುರಿಸಲು ಈತನಕ ಕೈಗೊಳ್ಳದ ಕ್ರಮಗಳ ಬಗ್ಗೆ ಅವಲೋಕನ ನಡೆಸಲು ಎರ್ನಾ ಕುಳಂನಲ್ಲಿ ಇಂದು ಸಂಬಂಧಪಟ್ಟವರ ಮತ್ತು ಅಧಿಕಾರಿಗಳ ತುರ್ತು ಸಭೆ ಆರಂಭ ಗೊಂಡಿದೆ. ಮಳೆ ಸೃಷ್ಟಿಸಿದ ದುರಂತಕ್ಕೆ ಪರಿಹಾರ ಕಂಡುಕೊಳ್ಳಲು ಕೇವಲ ಸರಕಾರ ಗ್ರಹಿಸಿದ್ದಲ್ಲಿ ಮಾತ್ರ ಸಾಧ್ಯವಾಗದು, ಅದರೊಂದಿಗೆ ಜನರೂ ಕೈಜೋಡಿಸಿ ಸಹಕರಿಸಬೇಕೆಂದು ಅವಲೋಕನ ಸಭೆ ಆರಂಭಗೊಳ್ಳುವ ಮೊದಲು ಕಂದಾಯ ಸಚಿವ ಇ. ಚಂದರಶೇಖರನ್ ವಿನಂತಿಸಿಕೊಂಡಿ ದ್ದಾರೆ. ರಕ್ಷಾ ಕಾರ್ಯಾಚರಣೆ ಸರಿಯಾದ ರೀತಿಯಲ್ಲೇ ಸಾಗುತ್ತಿದೆ. ಸರಕಾರ ತಮ್ಮ ಪರಿಮಿತಿಯೊಳಗೆ ಅಗತ್ಯದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಕೃತಿಕ ದುರಂತದ ಬಗ್ಗೆ ಅಲೋಕನ ನಡೆಸಲು ಬಂದಿರುವ ಕೇಂದ್ರ ತಂಡವೂ ಈಗ ಕೇರಳದಲ್ಲಿದೆ. ಅದರಿಂದಾಗಿ ಕೇರಳ ಈಗ ಎದುರಿಸುತ್ತಿರುವ ಸಂಕಷ್ಟಗಳು ಕೇಂದ್ರ ತಂಡಕ್ಕೆ ಸಹಜವಾಗಿಯೇ ಮನದಟ್ಟಾಗಲಿದೆ. ಅದಕೆ ಹೊಂದಿಕೊಂಡು ಕೇಂದ್ರದಿಂದ ಕೇರಳಕ್ಕೆ ಅಗತ್ಯದ ಸಹಾಯವೂ ಲಭಿಸುವ ನಿರೀಕ್ಷೆಯನ್ನು ತಾವು ಹೊಂದಿದ್ದಾರೆಂದು ಸಚಿವರು ತಿಳಿಸಿದರು. ಪ್ರಳಯ ತಾಂಡವ  ವೆಸಗುತ್ತಿರುವ ಕೇರಳಕ್ಕೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ತುರ್ತಾಗಿ ಐದು ಕೋಟಿ ರೂ.ಗಳ ಆರ್ಥಿಕ ನೆರವು ಘೋಷಿಸಿದ್ದಾರೆ. ಇದರ ಹೊರತಾಗಿ ಕರ್ನಾಟಕ ಸರಕಾರವೂ ಕೇರಳಕ್ಕೆ ಸಹಾಯ ಹಸ್ತದ ಭರವಸೆ ನೀಡಿದೆ. ಪ್ರಳಯದ ಹಿನ್ನೆಲೆಯಲ್ಲಿ ಸದ್ಯ ಕೇರಳ ಸಂದರ್ಶಿಸದಂತೆ ಅಮೆರಿಕ ತಮ್ಮ ಪ್ರಜೆಗಳಿಗೂ ಸಲಹೆ ನೀಡಿದೆ.

ಸೋಮವಾರದಿಂದ ಮಳೆ ಇನ್ನಷ್ಟು ಬಿರುಸು

ತಿರುವನಂತಪುರ: ರಾಜ್ಯದಲ್ಲಿ ಮುಂದಿನ ಸೋಮವಾರದಿಂದ ಮಳೆ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಯಿರುವ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಪಾಲಿಸಬೇಕೆಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

NO COMMENTS

LEAVE A REPLY