ಅವಳಿ ಪಾಸ್ಪೋರ್ಟ್ ಗಲ್ಫ್ನಲ್ಲಿರುವ ಕೀಳೂರು ನಿವಾಸಿ ವಿರುದ್ಧ ಕೇಸು

0
22

ಕಾಸರಗೋಡು: ಪಾಸ್‌ಪೋರ್ಟ್ ನವೀಕರಿಸಿ ಲಭಿಸಲು ರಾಯಭಾರಿ ಮೂಲಕ ಪಾಸ್‌ಪೋರ್ಟ್ ಊರಿಗೆ ತಲುಪಿಸಿದ ಕೀಳೂರು ನಿವಾಸಿ ವಿರುದ್ಧ ಅವಳಿ ಪಾಸ್‌ಪೋರ್ಟ್ ಕೈವಶವಿರಿಸಿಕೊಂಡ ಸಂಬಂಧ ಕೇಸು ದಾಖಲಿಸಲಾಗಿದೆ. ಮೇಲ್ಪರಂಬ ಕೀಳೂರಿನ ರಸಾಕ್ ಎಂಬಾತ ಗಲ್ಫ್‌ನಿಂದ ನವೀಕರಿಸಿ ಲಭಿಸಲು ಭಾರತೀಯ ರಾಯಭಾರಿ ಮೂಲಕ ಪಾಸ್‌ಪೋರ್ಟ್‌ನ್ನು ಊರಿಗೆ ಕಳುಹಿಸಿದ್ದನು. ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳು ವೇರಿಫಿಕೇಶನ್ ನಡೆಸಿದ್ದರು. ಕ್ರೈಂಬ್ರಾಂಚ್ ನಡೆಸಿದ ತನಿಖೆಯಲ್ಲಿ ಇದೀಗ ಗಲ್ಫ್‌ನಲ್ಲಿರುವ ರಸಾಕ್ ಎರಡು ಪಾಸ್‌ಪೋರ್ಟ್‌ಗಳನ್ನು ಕೈವಶವಿರಿಸಿಕೊಂಡಿರುವುದಾಗಿ ಪತ್ತೆಯಾಗಿದೆ. ಕ್ರೈಂಬ್ರಾಂಚ್‌ನ ವರದಿಯ ಹಿನ್ನೆಲೆಯಲ್ಲಿ ರಸಾಕ್ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಪಾಸ್‌ಪೋರ್ಟ್ ಗಳನ್ನು ಪತ್ತೆಹಚ್ಚಲಿರುವ ಕ್ರಮ ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY