ಮನೆಯಿಂದ ಕಳವು: ಆರೋಪಿಗೆ ಆರು ವರ್ಷ ಸಜೆ, ಜುಲ್ಮಾನೆ

0
34

ಕಾಸರಗೋಡು: ಮನೆಗೆ ಅಕ್ರಮ ವಾಗಿ ನುಗ್ಗಿ ಮೊಬೈಲ್ ಫೋನ್ ಇತ್ಯಾದಿ ಸಾಮಗ್ರಿಗಳನ್ನು ಕಳವುಗೈದ ಪ್ರಕರಣದ ಆರೋಪಿಗೆ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(೧) ಎರಡು ಸೆಕ್ಷನ್‌ಗಳಲ್ಲಾಗಿ ತಲಾ ಎರಡು ವರ್ಷ ಸಜೆ ಮತ್ತು ತಲಾ ೩೦೦೦ ರೂ. ಜುಲ್ಮಾನೆ ಮತ್ತು ಇನ್ನೊಂದು ಸೆಕ್ಷನ್‌ನಲ್ಲಿ ಎರಡು ವರ್ಷ ಸೇರಿದಂತೆ ಒಟ್ಟು ಆರು ವರ್ಷ ಸಜೆ ಮತ್ತು ೬೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ನೆಕ್ರಾಜೆ ಗ್ರಾಮದ ಚೆನ್ನಡ್ಕದ ಮೊಹಮ್ಮದ್ ಸುಹೈಲ್(೨೧) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಎರಡು ವರ್ಷಗಳಲ್ಲಾಗಿ ಒಟ್ಟಿಗೆ ಅನುಭವಿಸಿದರೆ ಸಾಕೆಂದೂ, ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

೨೦೧೦ ಆಗೋಸ್ತು ೪ರಂದು ಬೇಳ ಗ್ರಾಮದ  ವಿಷ್ಣುಮೂರ್ತಿ ನಗರದ  ನಳಿ ನಾಕ್ಷ ಎಂಬವರ ಮನೆಗೆ ನುಗ್ಗಿ ೧೦೦೦ ರೂ. ಮೌಲ್ಯದ ಮೊಬೈಲ್ ಫೋನ್, ೧೦೦೦ ರೂ. ಮೌಲ್ಯದ ಬೆಳ್ಳಿ ಆಭರಣ, ರೋಲ್ಡ್ ಗೋಲ್ಡ್‌ನ ಒಂದು ಸರ ಮತ್ತು ಎರಡು ಬಳೆ ಕದ್ದ ದೂರಿನಂತೆ ಬದಿಯಡ್ಕ ಪೊಲೀಸರು ಸುಹೈಲ್ ವಿರುದ್ಧ ಪ್ರಕರಣ ದಾಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ನ್ಯಾಯಾಲಯ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ.

NO COMMENTS

LEAVE A REPLY