ಮಾರ್ಚ್, ಧರಣಿ: ರೈತ ಸಂಘದ ೫೦೦ ಮಂದಿ ವಿರುದ್ಧ ಕೇಸು

0
39

ಕಾಸರಗೋಡು: ಕೇಂದ್ರ ಸರಕಾರ ಜನದ್ರೋಹ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಅಂತಹ ನೀತಿಗಳನ್ನು ಪ್ರತಿಭಟಿಸಿ ನಗರದ ಪ್ರಧಾನ ಅಂಚೆಕಚೇರಿ ಮುಂಭಾಗ ರಸ್ತೆಯ ಒಂದು ಭಾಗವನ್ನು ಸೇರಿಸಿ ಚಪ್ಪರ ಹಾಕಿ ನಿನ್ನೆ ಧರಣಿ ಹೂಡಿದ ರೈತ ಸಂಘದ  ನೇತಾರರೂ ಸೇರಿದಂತೆ ೫೦೦ ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಸಿ.ಎಚ್. ಕುಂಞಂಬು, ಜಿಲ್ಲಾಧ್ಯಕ್ಷ ಪಿ. ಜನಾರ್ದನನ್, ಟಿ.ಕೆ. ರಾಜನ್, ಎ. ರವೀಂದ್ರನ್, ರಮೇಶನ್, ಅಬ್ದುಲ್ಲ ಖಾದರ್ ಸೇರಿದಂತೆ ಒಟ್ಟು ೫೦೦ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಪೊಲೀಸರ ಆಜ್ಞೆ ಉಲ್ಲಂಘಿಸುವಿಕೆ, ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸುವಿಕೆ, ರಸ್ತೆ ಅತಿಕ್ರಮಿಸಿ ಚಪ್ಪರ ನಿರ್ಮಿಸುವಿಕೆ ಇತ್ಯಾದಿ ಸೆಕ್ಷನ್‌ಗಳ ಪ್ರಕಾರ ಇವರ ವಿರುದ್ಧ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY