ಸಾರಿಗೆ ಬಸ್ಗೆ ಕಲ್ಲೆಸೆತ ಮೂವರ ವಿರುದ್ಧ ಕೇಸು

0
44

ಕುಂಬಳೆ: ಸಂಚರಿಸುತ್ತಿದ್ದ ಕೆಎಸ್.ಆರ್.ಟಿ.ಸಿ ಬಸ್‌ಗೆ ಕಲ್ಲೆಸೆದು ಹಾನಿಗೈದ ಪ್ರಕರಣದಲ್ಲಿ ಕಂಡರೆ ಪತ್ತೆಹಚ್ಚಬಹುದಾದ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬಂದ್ಯೋಡು ಬಳಿಯ ಮಳ್ಳಂಗೈಯಲ್ಲಿ ಈ ತಿಂಗಳ ೬ರಂದು ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗೆ ಕಲ್ಲೆಸೆಯಲಾಗಿದೆ. ಬಸ್‌ನ ಮುಂಭಾಗದ ಗಾಜು ಪುಡಿಗೈಯ್ಯಲ್ಪಟ್ಟು ಚಾಲಕ ಜಮಾಲ್‌ರ ಮುಖಕ್ಕೆ ಕಲ್ಲು ತಾಗಿದ್ದು, ಇದರಿಂದ ದಿಢೀರನೆ ಬಸ್ ನಿಲ್ಲಿಸಿದಾಗ ನಿರ್ವಾಹಕ ರಂಗಪ್ಪ ಬಿದ್ದು  ಗಾಯಗೊಂಡಿದ್ದರು. ಮಂಗಲ್ಪಾಡಿ ಪ್ರತಾಪ ನಗರದಲ್ಲಿ ಯುವಕನೋರ್ವ ಕೊಲೆಗೀಡಾದ ಹಿನ್ನೆಲೆಯಲ್ಲಿ ವಿವಿಧೆಡೆ ಪೊಲೀಸರು ಕಟ್ಟೆಚ್ಚರ ವಹಿಸುತ್ತಿರು ವಂತೆಯೇ ಕಿಡಿಗೇಡಿಗಳು ಬಸ್‌ಗೆ ಕಲ್ಲೆಸೆ ದಿದ್ದರು. ಈ ಸಂಬಂಧ ಚಾಲಕ ಜಮಾಲ್ ನೀಡಿದ ದೂರಿನಂತೆ ಮೂವರ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY