ಅರಣ್ಯದಲ್ಲಿ ಮದ್ಯ ತಯಾರಿ ಹುಳಿರಸ, ಸಲಕರಣೆ ಪತ್ತೆ

0
44

ಮುಳ್ಳೇರಿಯ: ಬಂದಡ್ಕ ಬಳಿಯ ಮಾಣಿಮೂಲೆ ಅರಣ್ಯದಲ್ಲಿ ನಾಡ ಸಾರಾಯಿ ಉತ್ಪಾದನಾ ಘಟಕವನ್ನು ಅರಣ್ಯಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸರಕಾರಿ ಅರಣ್ಯದೊಳಗೆ ಪೊದೆಗಳೆಡೆ ಬಚ್ಚಿಟ್ಟಿದ್ದ ೬೦೦ ಲೀಟರ್ ಹುಳಿರಸ ಹಾಗೂ ಸಾರಾಯಿ ತಯಾರಿಸುವ ಉಪಕರಣಗಳನ್ನು ಪತ್ತೆಹಚ್ಚಲಾಗಿದೆ. ಅಬಕಾರಿ ಅಧಿಕಾರಿ ಬಿ. ಉಮ್ಮರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯದೊಳಗೆ ಪೊದೆಗಳೆಡೆ ಬ್ಯಾರಲ್ ನಲ್ಲಿ ತುಂಬಿಸಿಟ್ಟ ಹುಳಿರಸ ಪತ್ತೆಯಾಗಿದೆ. ಅರಣ್ಯದಲ್ಲಿ ಹುಳಿರಸ ತಯಾರಿಸಿ ಮದ್ಯ ಉತ್ಪಾದಿಸಲಾಗುತ್ತಿದೆಯೆಂದು ಅಂದಾಜಿಸಲಾಗಿದೆ. ಹುಳಿರಸ ಬಚ್ಚಿ ವ್ಯಕ್ತಿಗಳ ಮಾಹಿತಿ ಲಭಿಸಿರುವುದಾಗಿ ಅgಣ್ಯಾಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY