ಸರಕಾರಿ ಸಿಬ್ಬಂದಿಗಳ ಒಂದು ತಿಂಗಳ ವೇತನ ಪರಿಹಾರ ನಿಧಿಗೆ ನೀಡಿ: ತಯಾರಾಗದವರು ಬರೆದು ತಿಳಿಸಿ-ಸಚಿವ

0
33

ತಿರುವನಂತಪುರ: ಪ್ರವಾಹದಿಂದ ತತ್ತರಿಸಿರುವ ಕೇರಳದ ಪುನರ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಸರಕಾರಿ ನೌಕರರು ಒಂದು ತಿಂಗಳ ವೇತನವನ್ನು ದೇಣಿಗೆ ಯಾಗಿ ನೀಡಬೇಕೆಂದು ಹಣಕಾಸು ಸಚಿವ ಡಾ. ಥೋಮಸ್ ಐಸಾಕ್ ತಿಳಿಸಿದ್ದಾರೆ. ಒಂದು ತಿಂಗಳ ವೇತನ ನೀಡಲು ತಯಾರಾಗದ ನೌಕರರು ಅದನ್ನು ಲಿಖಿತವಾಗಿ ಬರೆದು ತಿಳಿಸು ವಂತೆಯೂ ಹಾಗೆ ಬರೆದು ನೀಡದೇ ಇರುವ ನೌಕರರ ವೇತನವನ್ನು ಪರಿಹಾರ ನಿಧಿಗೆ ಹಸ್ತಾಂ ತರಿಸಲಾಗುವುದೆಂದೂ ಸಚಿವರು ತಿಳಿಸಿದ್ದಾರೆ. ವಿವಿಧ ಸರಕಾರಿ ನೌಕರರ ಸಂಘಟನೆಗಳ ಪದಾಧಿಕಾರಿ ಗಳೊಂದಿಗೆ ತಿರುವನಂತಪುರದಲ್ಲಿ ಚರ್ಚೆ ನಡೆಸಿದ ಬಳಿಕ ಸಚಿವರು ಈ ವಿಷಯ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪರಿಹಾರನಿಧಿ ಗೆ ದೇಣಿಗೆ ನೀಡುವ ಮೊದಲು ಸರಕಾರಿ ನೌಕರರೊಂದಿಗೆ ಚರ್ಚೆ ನಡೆಸಿ ಇಷ್ಟವಾದಷ್ಟು ಮೊತ್ತವನ್ನು ಮಾತ್ರವೇ ದೇಣಿಗೆ ರೂಪದಲ್ಲಿ ಅವರಿಂದ ವಸೂಲಿ ಮಾಡಬೇಕೆಂದೂ ಸಭೆಯಲ್ಲಿ ಭಾಗವಹಿಸಿದ ಯುಡಿಎಫ್ ಅನುಕೂಲ ಸರಕಾರಿ ನೌಕರ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದರು. ಮಾತ್ರಲ್ಲದೆ ಒಂದು ತಿಂಗಳ ವೇತನವನ್ನು ಪೂರ್ಣವಾಗಿ ನೀಡಬೇಕು. ಇಲ್ಲವಾದಲ್ಲಿ ಬೇಡವೆಂಬ ಸರಕಾರದ ನಿಲುವನ್ನು ಅಂಗೀಕರಿಸುವಂತಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಷಯದಲ್ಲಿ ಏಕಾಂಗಿಯಾಗಿ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ನೌಕರರು ಮುಂದಿ ರಿಸಿರುವ ವಿಷಯವನ್ನು ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಸಭೆಯ ಗಮನಕ್ಕೆ ತರಲಾಗುವುದೆಂದು ಸಚಿವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡಲು ಆಡಳಿತ ಪಕ್ಷ ಅನುಕೂಲ ಸರಕಾರಿ ನೌಕರರ ಸಂಘಟನೆಗಳು ಸಮ್ಮತ ವ್ಯಕ್ತಪಡಿಸಿದೆ.

NO COMMENTS

LEAVE A REPLY