ಹತ್ಯೆಯತ್ನ ಪ್ರಕರಣದ ಆರೋಪಿ ಬಂಧನ

0
16

ಹೊಸದುರ್ಗ: ತಿರುವೋಣಂ ದಿನದಂದು ಯುವಕನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನ್ಯಾಯಾಲಯ ಪರಿಸ ರದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಅಜಾನೂರು ಕಡಪ್ಪುರ ನಿವಾಸಿ ಸುಶೀಲ್(೩೦) ಎಂಬವರ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿ ಕೊಳವಯಲ್ ಪೊಯ್ಯೆಕ್ಕರ ನಿವಾಸಿ ಅಜಿತ್(೨೫) ಎಂಬಾತ ಬಂಧಿತ ವ್ಯಕ್ತಿ. ಈತ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯವಾದಿ ಯನ್ನು ಕಾಣಲು ತಲುಪಿದಾಗ ನ್ಯಾಯಾಲಯ ಪರಿಸರದಿಂದ ಸೆರೆ ಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಾದ ಐದು ಮಂದಿಯನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಇವರು ರಿಮಾಂಡ್‌ನಲ್ಲಿದ್ದಾರೆ.

ಹಲವು ಬಾರಿ ಮನೆಗೆ ಸುತ್ತುವರಿದು ಸೆರೆ ಹಿಡಿಯಲು ಯತ್ನಿಸಿದರೂ ಈತ ತಪ್ಪಿಸಿಕೊಂಡಿದ್ದನೆಂದು ಪೊಲೀಸರು ತಿಳಿಸಿ ದ್ದಾರೆ. ನ್ಯಾಯವಾದಿಯನ್ನು ಕಾಣಲು ಈತ ತಲುಪುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಫ್ತಿ ವೇಷದಲ್ಲಿ ಕಾದು ನಿಂತ ಪೊಲೀಸರು ಅಜಿತ್‌ನನ್ನು ಸುತ್ತುವರಿದು ಬಂಧಿಸಿದ್ದಾರೆ. ಹೊಸದುರ್ಗ ಎಸ್.ಐ. ವಿಷ್ಣು ಪ್ರಸಾದ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

NO COMMENTS

LEAVE A REPLY