ಹೆದ್ದಾರಿ ಅಭಿವೃದ್ಧಿ: ನಷ್ಟಪರಿಹಾರ ಲಭಿಸದೆ ಅಂಗಡಿ ತೆರವುಗೊಳಿಸೆವು-ವ್ಯಾಪಾರಿಗಳು

0
17

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸ್ಥಳ ವಶಪಡಿಸುವ ಕಾರ್ಯಗಳು ಅಂತಿಮ ಹಂತದಲ್ಲಿದ್ದರೂ ಜೀವನಕ್ಕಾಗಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ಸರಕಾರ, ಕಟ್ಟಡ ಮಾಲಕರು ನಷ್ಟಪರಿಹಾರ ನೀಡದೆ ಒಕ್ಕಲೆಬ್ಬಿಸಲಿರುವ ಯತ್ನವನ್ನು ವಿರೋಧಿಸಬೇಕೆಂದು ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಕಾರ್ಯನಿರತರ ಸಮಿತಿ ಸಭೆ ಆಗ್ರಹಿಸಿದೆ. ಯಾವುದೇ ಕಾರಣಕ್ಕೂ ಮಾಲಕರ ಬೆದರಿಕೆಗೆ ಜಗ್ಗಬಾರದೆಂದೂ ವ್ಯಾಪಾರಿಗಳಿಗೆ ಸಭೆ ಎಚ್ಚರಿಸಿದೆ. ಕಟ್ಟಡ ಮಾಲಕರಿಗೆ ದೊಡ್ಡ ಮೊತ್ತ ದ ನಷ್ಟಪರಿಹಾರ ಸರಕಾರ ನೀಡುತ್ತಿದೆ. ಅಂಗಡಿಗಳಲ್ಲಿ ವ್ಯಾಪಾರಿಗಳು ವೆಚ್ಚಮಾಡಿ  ಸ್ಥಾಪಿಸಿದ ಪೀಠೋಪಕರಣಗಳು, ಸಾಮಗ್ರಿಗಳು ಸೇರಿದಂತೆ ಎಲ್ಲದಕ್ಕೂ ಕಟ್ಟಡ ಮಾಲಕರಿಗೆ ನಷ್ಟ ಪರಿಹಾರ ನೀಡಲಾಗುತ್ತಿದೆಯೆಂದು ಸಂಬಂಧಪಟ್ಟವರು ತಿಳಿಸುತ್ತಾರೆ. ಆದರೆ  ವ್ಯಾಪಾರಿಗಳಿಗೆ ಈ ಮಾಲಕರು ಯಾವುದೇ ನಷ್ಟಪರಿಹಾರ ನೀಡುತ್ತಿಲ್ಲ. ಅಲ್ಲದೆ ಬೆದರಿಸಿ ಅಂಗಡಿ ಬಿಟ್ಟು ಹೋಗುವಂತೆ ಮಾಡುತ್ತಾರೆ. ಹೆದ್ದಾರಿ ಅಭಿವೃದ್ಧಿಯನ್ನು ವ್ಯಾಪಾರಿಗಳು ವಿರೋಧಿಸುವುದಿಲ್ಲ ಬದಲಾಗಿ ವ್ಯಾಪಾರಿಗಳನ್ನು ತೆರವುಗೊಳಿಸಿ ಸರಕಾರದಿಂದ ಹಣ ಪಡೆಯಲು ಮಾಲಕರು ನಡೆಸುವ ಯತ್ನ ವಿರೋಧಿಸಲು ಸಭೆ ತೀರ್ಮಾನಿಸಿದೆ. ಅಧ್ಯಕ್ಷ ಎ.ಕೆ. ಮೊಯ್ದೀನ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಕಲ್ಲಂಗೈ, ಎ.ಎ. ಅಸೀಸ್, ಅಶ್ರಫ್, ಮಾಹಿನ್ ಕೋಳಿಕ್ಕರ, ಶಶಿಧರನ್, ನಾಗೇಶ್ ಶೆಟ್ಟಿ ಸಹಿತ ಹಲವರು ಮಾತನಾಡಿದರು.

NO COMMENTS

LEAVE A REPLY