ವೃದ್ಧೆಯ ಚಿನ್ನಾಭರಣ ದರೋಡೆಯತ್ನ: ಆರೋಪಿ ಬಂಧನ

0
15

ಕಾಸರಗೋಡು: ಚೆಮ್ನಾಡ್‌ನಲ್ಲಿ ವೃದ್ಧೆಯ ಮುಖಕ್ಕೆ ಮೆಣಸಿನ ಹುಡಿ ಎರಚಿ ಚಿನ್ನಾಭರಣ ದರೋಡೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೆಮ್ನಾಡ್ ಕೊಂಬನಡ್ಕ ನಿವಾಸಿ ಕೆ.ಎ. ಅಹಮ್ಮದ್ ಫೈಸಲ್ (೩೨) ಎಂಬಾತ ಬಂಧಿತ ವ್ಯಕ್ತಿ. ಚೆಮ್ನಾಡ್ ಮುಂಡಾಕುಳದ ಪಿ.ಎಚ್. ಅಬ್ದುಲ್ ಲತೀಫ್‌ರ ಪತ್ನಿ ಜಮೀಲರ ಚಿನ್ನಾಭರಣ ದರೋಡೆಗೆ ಯತ್ನಿಸಿದ ಪ್ರಕರಣದಲ್ಲಿ ಅಹಮ್ಮದ್ ಫೈಸಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ರಾತ್ರಿ ಜಮೀಲ ಮಾತ್ರವೇ ಕ್ವಾರ್ಟರ್ಸ್‌ನಲ್ಲಿದ್ದಾಗ ಅಲ್ಲಿಗೆ ಅತಿಕ್ರಮಿಸಿ ನುಗ್ಗಿದ ಆರೋಪಿ ಮೆಣಸಿನಹುಡಿ ಎರಚಿ ಚಿನ್ನಾಭರಣ ದರೋಡೆಗೆ ಯತ್ನಿಸಿದ್ದಾನೆಂದು ದೂರಲಾಗಿದೆ. ಈ ಪ್ರಕರಣದಲ್ಲಿ ೧೭ರ ಹರೆಯದ ಯುವತಿಯನ್ನು ಪೊಲೀಸರು  ನಿನ್ನೆಯೇ ಕಸ್ಟಡಿಗೆ ತೆಗೆದಿದ್ದರು.

NO COMMENTS

LEAVE A REPLY