ಫೋನ್ ಕರೆಮಾಡಿ ಎಟಿಎಂ ನಂಬ್ರ ಪಡೆದು ವಂಚನೆ ಯತ್ನ: ಜಾಗ್ರತೆ ಅಗತ್ಯ

0
13

ಪೈವಳಿಕೆ: ಗೃಹಿಣಿಗೆ ಫೋನ್ ಮಾಡಿ ಎಟಿಎಂ ನಂಬ್ರ, ಬ್ಯಾಂಕ್‌ನ ಖಾತೆ ನಂಬ್ರಕೇಳಿ ವಂಚಿಸಲು ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಬೆರಿಪದವು ನಿವಾಸಿ ಕಾರವಲ್ ಏಜೆಂಟ್ ವೀಣಾ ಎಂ.ಭಟ್‌ರ ಮೊಬೈಲ್‌ಗೆ ನಿನ್ನೆ ಸಂಜೆ ಕರೆಮಾಡಿ ‘ನಿಮ್ಮ ಎಟಿಎಂ ಬ್ಲೋಕ್ ಆಗಿದೆ. ಸರಿಮಾಡಲು ಅದರ ನಂಬ್ರ ಹಾಗೂ ಇತರ ಮಾಹಿತಿ ಬೇಕಾಗಿದೆ. ಬೆಂಗಳೂರಿನ ವಿಜಯಾ ಬ್ಯಾಂಕ್‌ನಿಂದ ಕರೆಮಾಡುತ್ತಿರುವುದು” ಎಂಬ ಕರೆ ೭೨೫೦೫೩೮೩೮೩ ಎಂಬ ನಂಬ್ರದಿಂದ ಬಂದಿತ್ತು. ಇದನ್ನು ಸತ್ಯವೆಂದುತಿಳಿದ ವೀಣಾ ಎಲ್ಲಾ ಮಾಹಿತಿಗಳನ್ನು ನೀಡಿದರು. ಅಲ್ಪ ಸಮಯ ಕಳೆದ ಬಳಿಕ ಅದೇ ನಂಬ್ರದಿಂದ ಮತ್ತೊಂದು ಕರೆ ಬಂದಿದ್ದು, ನಿಮ್ಮ ಪತಿಯ ಎಟಿಎಂ ನಂಬ್ರ ಬೇಕಾಗಿದೆ. ಬಾಯಾರು ‘ವಿಜಯಾ ಬ್ಯಾಂಕ್‌ನ ಮೆನೇಜರ್ ಕರೆಮಾಡುತ್ತಿದ್ದೇನೆ ’ ಎಂದು ತಿಳಿಸಲಾಗಿತ್ತು. ಪತಿಯ ಎಟಿಎಂ ನಂಬ್ರ ತಿಳಿಯದ ಕಾರಣ ಪತಿಗೆ ಕರೆಮಾಡಿ ಅವರು ಶಂಕೆ ತಾಳಿ  ಇನ್ನು ಕರೆಬಂದರೆ ಕಟ್ ಮಾಡು ಎಂದು ತಿಳಿಸಿದರು.  ಕೂಡಲೇ ಬಾಯಾರು ವಿದಯಾ ಬ್ಯಾಂಕ್‌ಗೆ ತೆರಳಿ ವಿಷಯ ತಿಳಿಸಿದರು. ಆವಾಗಲೇ ಕರೆ ನಕಲಿ ಎಂದು ತಿಳಿದಿದ್ದು, ಕೂಡಲೇ ಆ ಖಾತೆಯನ್ನು ಬ್ಲೋಕ್ ಮಾಡಲಾಯಿತು.ಇದರಿಂದಾಗಿ ಖಾತೆಯಿಂದ ಹಣವೇನೂ ನಷ್ಟವಾಗಲಿಲ್ಲ. ಈಬಗ್ಗೆ ಸೈಬರ್ ಸೆಲ್‌ಗೆ ದೂರು ನೀಡುವುದಾಗಿ ವೀಣಾ ಭಟ್ ತಿಳಿಸಿದ್ದಾರೆ.ಪತಿಯ ಎಟಿಎಂ ನಂಬ್ರ ತಿಳಿಯದ ಕಾರಣ  ಕರೆಮಾಡಿದವರಿಗೆ ನೀಡಲಾಗಿರಲಿಲ್ಲ.

 

NO COMMENTS

LEAVE A REPLY