ಜಿಲ್ಲೆಯ ಐದು ಸಹಸ್ರದಷ್ಟು ಕ್ರಿಮಿನಲ್ ಆರೋಪಿಗಳು ವಿದೇಶಕ್ಕೆ ಪಲಾಯ: ಓಪನ್ ಎಂಡೆಡ್ ವಾರಂಟ್‌ನನ್ವಯ ಸೆರೆಗೊಳಗಾದಲ್ಲಿ ಪಾಸ್‌ಪೋರ್ಟ್ ಅಸಿಂಧು

0
19

ಕಾಸರಗೋಡು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲುಗೊಂಡ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗ ಳಾಗಿ ಬಳಿಕ ಗಲ್ಫ್ ಇತ್ಯಾದಿ ವಿದೇಶಗ ಳಿಗೆ ತೆರಳಿ ತಲೆಮರೆಸಿಕೊಂಡಿರುವ ವರನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆಯ “ಓಪನ್ ಎಂಡೆಡ್ ವಾರಂಟ್” ಎಂಬ ಹೊಸ ಕಾರ್ಯಾಚರಣೆಯಲ್ಲಿ  ಆರೋಪಿ ಗಳು ಬಂಧಿಸಲ್ಪಟ್ಟಲ್ಲಿ ಅವರ ಪಾಸ್ ಪೋರ್ಟ್ ಕೂಡಾ  ಅಸಿಂಧುಗೊಳ್ಳಲಿದೆ.

ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿಕೊಳ್ಳಲಾದ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸುಮಾರು ಐದು ಸಾವಿರದಷ್ಟು ಮಂದಿ ಈಗ ಗಲ್ಫ್ ಸೇರಿದಂತೆ ವಿದೇಶಗಳಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ತಲೆಮರೆಸಿಕೊಂಡಿರುವ  ಆರೋಪಿಗಳ ಪೂರ್ಣ ಮಾಹಿತಿಗಳನ್ನು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಂಗ್ರಹಿಸಿ ವಿಶೇಷ ಯಾದಿ ತಯಾರಿಸ ಲಾಗುತ್ತಿದೆ. ಮಾತ್ರವಲ್ಲ, ಅವರ ಪಾಸ್‌ಪೋರ್ಟ್‌ಗಳ ಪೂರ್ಣ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿ ದ್ದಾರೆ. ಆ ಎಲ್ಲಾ ಮಾಹಿತಿಗಳನ್ನು ಒಳಪಡಿಸಿ ಅಂತಹ ಆರೋಪಿಗಳನ್ನು ರೆಡ್‌ಕಾರ್ನರ್ ನೋಟೀಸು ಮೂಲಕ ಸೆರೆ ಹಿಡಿಯಲು ಓಪನ್ ಎಂಡೆಂಡ್ ವಾರಂಟ್ ಜ್ಯಾರಿ ಗೊಳಿಸುವಂತೆ ಪ್ರತೀ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಸಂಬಂಧಪಟ್ಟ ನ್ಯಾಯಾ ಲಯಗಳಿಗೆ ಅರ್ಜಿ ಸಲ್ಲಿಸತೊಡಗಿದ್ದಾರೆ. ಅದರಂತೆ ನ್ಯಾಯಾಲಯ ಹೊರಡಿಸುವ ಓಪನ್ ಎಂಡೆಂಡ್ ವಾರಂಟ್‌ನ್ನು ಗೃಹ ಖಾತೆ ಮೂಲಕ ವಿದೇಶಗಳಲ್ಲಿ ಭಾರತೀಯ ರಾಯಭಾರಿ ಕೇಂದ್ರಕ್ಕೆ ಕಳುಹಿಸಿ ರೆಡ್ ಕಾರ್ನರ್ ನೋಟೀಸು ಇಂಟರ್‌ಪೋಲ್ (ಅಂತಾರಾಷ್ಟ್ರೀಯ ಪೊಲೀಸ್)ಗೆ ಜ್ಯಾರಿ ಗೊಳಿಸಿ ಅವರ ಮೂಲಕ  ಆರೋಪಿಗಳನ್ನು ಸೆರೆ ಹಿಡಿದು  ಭಾರತ ಸರಕಾರಕ್ಕೆ ಒಪ್ಪಿಸಲಾಗುತ್ತಿದೆ. ಹೀಗೆ  ಒಪ್ಪಿಸಲಾಗುವ ಆರೋಪಿಗಳನ್ನು ನಂತರ ಸಂಬಂಧಪಟ್ಟ ಪೊಲೀಸರಿಗೆ ಹಸ್ತಾಂತರಿಸಲಾಗುತ್ತಿದೆ. ಬಳಿಕ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ಹಾಜರುಪಡಿಸಿ, ಅವರ ಮೇಲಿನ ವಿಚಾರಣೆಯನ್ನು ನ್ಯಾಯಾಲಯದಲ್ಲಿ ಆರಂಭಗೊಳಿಸು ವಂತೆ ಮಾಡಲಾಗುವುದು.

ಓಪನ್ ಎಂಡೆಂಡ್ ವಾರೆಂಟ್ ಮೂಲಕ ಬಂಧಿಸಲ್ಪಟ್ಟಿರುವ ಆರೋಪಿಗಳ ಪಾಸ್‌ಪೋರ್ಟ್ ಅಸಿಂಧುಗೊಳ್ಳುವ ಹಿನ್ನೆಲೆಯಲ್ಲಿ ಅವರಿಗೆ ಪಾಸ್‌ಪೋರ್ಟ್ ಇನ್ನು ಕೂಡಾ ಲಭಿಸದು. ಅದರಿಂದಾಗಿ ವಿದೇಶಗಳಲ್ಲಿ ತಲೆಮರೆಸಿ ಕೊಂಡಿರುವ ಆರೋಪಿಗಳು ತಮ್ಮ ಪಾಸ್‌ಪೋರ್ಟ್ ನಷ್ಟಗೊಳ್ಳದಿರಲು ಓಪನ್ ಎಂಡೆಂಡ್ ವಾರಂಟಿನಲ್ಲಿ ಸಿಲುಕದೆ ವಿದೇಶದಿಂದ ಊರಿಗೆ ಬಂದು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅಥವಾ ನ್ಯಾಯಾಲಯದಲ್ಲಿ ಹಾಜರಾಗಬೇಕು. ಹೀಗೆ ಹಾಜರಾಗುವ ಆರೋಪಿಗಳಿಗೆ ಅವರ ಪಾಸ್‌ಪೋರ್ಟ್ ನಷ್ಟ ಹೊಂದದೆಂದು ಪೊಲೀಸರು  ತಿಳಿಸಿದ್ದಾರೆ.

NO COMMENTS

LEAVE A REPLY