ಕಾಸರಗೋಡು ಜನರಲ್, ಜಿಲ್ಲಾ ಆಸ್ಪತ್ರೆಯಲ್ಲಿ ಶೀಘ್ರ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಕರ್ಯ

0
10

ಕಾಸರಗೋಡು: ರಾಜ್ಯದ ಎಲ್ಲಾ ಜಿಲ್ಲೆ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ಇನ್ನು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಲಭಿಸಲಿದೆ.ಈತನಕ ರಾಜ್ಯದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಮಾತ್ರವಾಗಿ ಸೀಮಿತಗೊಳಿಸಲಾಗಿದ್ದ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಕರ್ಯಗಳು ಇನ್ನು ಜಿಲ್ಲಾ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ಲಭಿಸಲಿದೆ. ಇದಕ್ಕಿರುವ ಕ್ರಮಗಳು ಮತ್ತು ಅಗತ್ಯದ ಸೌಕರ್ಯಗಳನ್ನು ಶೀಘ್ರ ಏರ್ಪಡಿಸಲಾಗುವುದೆಂದು ರಾಜ್ಯ ಆರೋಗ್ಯ ಖಾತೆ ಸಚಿವ ಕೆ.ಕೆ. ಶೈಲಜಾ ತಿಳಿಸಿದ್ದಾರೆ. ಈ ಯೋಜನೆಯಂತೆ ಸೂಪರ್ ಸ್ಪೆಷಾಲಿಟಿ ಶ್ರೇಣಿಯಲ್ಲಿರುವ ತಜ್ಞ ಹಾಗೂ ನುರಿತ ವೈದ್ಯರನ್ನು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ಶೀಘ್ರ ನೇಮಿಸಲಾಗು ವುದು. ಅದಕ್ಕಿರುವ ಅಗತ್ಯದ ಕಟ್ಟಡ ಇತ್ಯಾದಿ ಸೌಕರ್ಯಗಳನ್ನು ಶೀಘ್ರ ಏರ್ಪಡಿಸಲಾಗುವುದು. ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ದಾಖಲಿಸಿ ಚಿಕಿತ್ಸೆವೊದಗಿಸುವ ಸೌಕರ್ಯಗಳನ್ನು ಏರ್ಪಡಿಸಲಾಗುವು ದು ಎಂದು ಸಚಿವರು ತಿಳಿಸಿದ್ದಾರೆ.

ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳ ರೋಗಿಗಳು ಉನ್ನತ ಮಟ್ಟದ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗಳ ವೈದ್ಯಕೀಯ ಆಸ್ಪತ್ರೆಗಳು ಅಥವಾ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆಶ್ರಯಿಸಬೇ ಕಾದ ಸ್ಥಿತಿ ಈಗಿದೆ. ಅಂತಹ ಚಿಕಿತ್ಸೆಗೆ ಭಾರೀ ಖರ್ಚು ಉಂಟಾಗುತ್ತಿದ್ದು, ಬಡವರಿಗೆ ಇದು ಕೈಗೆಟುಕದ ವಿಷಯವಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರಕಾರ ಈ ಹೊಸ ಯೋಜನೆ ಜ್ಯಾರಿಗೊಳಿಸಲು  ಮುಂದಾಗಿದೆ. ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಉನ್ನತ ಮಟ್ಟದ ಚಿಕಿತ್ಸೆಗಾಗಿಯೂ ಇದು ಸಹಕಾರಿಯಾಗಲಿದೆ.

ಸರಕಾರದ ಈ ತೀರ್ಮಾನದಂತೆ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಹೊಸದುರ್ಗ ಚೆಮ್ಮಟ್ಟಂಬೈಲ್‌ನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಇನ್ನು ಶೀಘ್ರ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಕರ್ಯ ಲಭಿಸಲಿದೆ.

ಜಿಲ್ಲೆ ಮತ್ತು ಜನರಲ್ ಆಸ್ಪತ್ರೆಗಳ ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಅಗತ್ಯದ ವೈದ್ಯರನ್ನು ನೇಮಿಸಲು ರಾಜ್ಯ ಆರೋಗ್ಯ ಇಲಾಖೆಯಲ್ಲಿ ಸೂಪರ್ ಸ್ಪೆಷಾಲಿಟಿ ಅರ್ಹತೆ ಹೊಂದಿರುವ ವೈದ್ಯರನ್ನು ಒಳಪಡಿಸಿ ವಿಶೇಷ ಕೇಡರ್‌ಗೂ ಈಗಾಗಲೇ ರೂಪು ನೀಡಲಾಗಿದೆ. ಅದರಿಂದ ಎಲ್ಲಾ ಜಿಲ್ಲೆಗಳ ಸೂಪರ್ ಸ್ಪೆಷಾಲಿಟಿ ವಿಭಾಗಗಳಿಗೆ ಅಗತ್ಯದ ವೈದ್ಯರನ್ನು ನೇಮಿಸಲಾಗು ವುದೆಂದು ಸಚಿವೆ ತಿಳಿಸಿದ್ದಾರೆ.

NO COMMENTS

LEAVE A REPLY