ಕಾರು ಢಿಕ್ಕಿ: ವೃದ್ಧ ಗಂಭೀರ

0
19

ಕಾಸರಗೋಡು: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಕಾರು ಢಿಕ್ಕಿ ಹೊಡೆದ ಕಾರಣ ವೃದ್ಧ ಕಾರಿನ ಬೋನೆಟ್‌ನ ಮೇಲೆ ಬಿದ್ದು ಬಳಿಕ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಚಟ್ಟಂ ಚಾಲ್‌ನಲ್ಲಿ ನಿನ್ನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಚಟ್ಟಂಚಾಲ್ ಪರಿಸರದ ಮೊಹಮ್ಮದ್ ಕುಂಞಿ(೬೫) ಎಂದು ಗುರುತಿಸಲಾಗಿದೆ. ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ಕಾರನ್ನು ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

NO COMMENTS

LEAVE A REPLY