ಕಾರುಗಳು ಢಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು

0
20

ಸೀತಾಂಗೋಳಿ: ಇಲ್ಲಿನ ಪೇಟೆಯಲ್ಲಿ ಇಂದು ಬೆಳಿಗ್ಗೆ ಎರಡು ಕಾರುಗಳು ಪರಸ್ಪರ ಢಿಕ್ಕಿ ಹೊಡೆದಿವೆ. ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಚಿಪ್ಪಾರ್ ನಿಂದ ಕಾಸರಗೋಡಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಹಾಗೂ ನೀರ್ಚಾಲ್‌ನಿಂದ ಕುಂಬಳೆ ಯತ್ತ ತೆರಳುತ್ತಿದ್ದ ಶವರ್ಲೆಟ್ ಕಾರು ಢಿಕ್ಕಿ ಹೊಡೆದಿವೆ.

ಕಾರುಗಳಲ್ಲಿದ್ದ ನಾಯ್ಕಾಪುವಿನ ಸುದರ್ಶನ ಶೆಣೈ (೬೦), ಚಿಪ್ಪಾರ್‌ನ ಕಿಶೋರ್ (೪೮) ಎಂಬವರು ಗಾಯಗಳಿಲ್ಲದೆ ಪಾರಾಗಿದ್ದಾರೆ. ಕಾರುಗಳು ಹಾನಿಗೊಂಡಿವೆ.

NO COMMENTS

LEAVE A REPLY