ಸ್ನೇಹಿತರೊಂದಿಗೆ ನಡೆದು ಹೋಗುತ್ತಿದ್ದ ಯುವಕನಿಗೆ ಹಿಂದಿನಿಂದ ಆಕ್ರಮಣ

0
29

ಕುಂಬಳೆ: ಸ್ನೇಹಿತರೊಂದಿಗೆ ನಡೆದು ಹೋಗುತ್ತಿದ್ದ ಯುವಕನಿಗೆ ತಂಡವೊಂದು ಹಿಂದಿನಿಂದ ಬಂದು ಆಕ್ರಮಿಸಿದ ಬಗ್ಗೆ ದೂರಲಾಗಿದೆ. ಮಣಿಯಂಪಾರೆ ನಿವಾಸಿ ಜೋಯೆಲ್ (೩೦) ಆಕ್ರಮಣದಿಂದ ಗಾಯಗೊಂಡ ವ್ಯಕ್ತಿ. ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ನಿನ್ನೆ ಸ್ನೇಹಿತರಾದ ಶರತ್ ಹಾಗೂ ಪ್ರಶಾಂತ್‌ರೊಂದಿಗೆ ಮಣಿಯಂಪಾರೆ-ದೇರಡ್ಕ ರಸ್ತೆಯಲ್ಲಿ ನಡೆದುಹೋಗುತ್ತಿದ್ದಾಗ ಕೌಶಿ ಎಂಬಾತನ ಸಹಿತ ನಾಲ್ಕು ಮಂದಿ ಹಿಂದಿನಿಂದ ಬಂದು ಕಬ್ಬಿಣದ ಸರಳಿನಿಂದ ಆಕ್ರಮಿಸಿದೆಯೆಂದು ಗಾಯಾಳು ಆರೋಪಿಸಿದ್ದಾರೆ.

NO COMMENTS

LEAVE A REPLY