ಗಲ್ಫ್ ಉದ್ಯೋಗಿ ಮನೆಯಿಂದ ಕಳವು ಯತ್ನ

0
22

ಕಾಸರಗೋಡು: ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ತಿಂಗಳುಗಳಿಂದ ನಡೆದ ದರೋಡೆ, ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗದೆ  ಪೊಲೀಸರು ಸಂದಿಗ್ಧತೆಯಲ್ಲಿರುವಾಗ ಕಳ್ಳರ ಹಾವಳಿ ಮತ್ತೆ ತೀವ್ರಗೊಂಡಿದೆ. 

ಕಾಸರಗೋಡು ತಾಯಲಂಗಾಡಿ ಉಷಾ ರೋಡ್ ನಲ್ಲಿರುವ ಗಲ್ಫ್ ಉದ್ಯೋಗಿಯ ಮನೆಗೆ ಕಳ್ಳರು ನುಗ್ಗಿದ್ದು, ಆದರೆ ಯಾವುದೇ ವಸ್ತು ದೋಚಲು ಸಾಧ್ಯವಾಗಲಿಲ್ಲ. ಇಲ್ಲಿನ ಸಿ.ಕೆ. ರಹೀಂ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಆ ಮನೆಯಲ್ಲಿ ರಹೀಂರ ಪತ್ನಿ ಹಾಗೂ ಮಕ್ಕಳು ವಾಸಿಸುತ್ತಿದ್ದಾರೆ. ಇವರು ನಿನ್ನೆ ಹಗಲು ಹೊತ್ತಿನಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದು, ಸಂಜೆ ವಾಪಸಾಗಿದ್ದಾರೆ. ಈ ವೇಳೆ ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದ ಸ್ಥಿತಿಯಲ್ಲೂ, ಮನೆಯೊಳಗೆ ಚೆಲ್ಲಾಪಿಲ್ಲಿಗೊಳಿಸಿರು ವುದು ಕಂಡುಬಂದಿದೆ. ಮನೆಯಲ್ಲಿ ಬೆಲೆಬಾಳುವ ಯಾವುದೇ ವಸ್ತುಗಳಿರಲಿಲ್ಲ ವೆಂದೂ ಆದ್ದರಿಂದ ಕಳ್ಳರಿಗೆ ದೋಚಲು ಯಾವುದೇ ವಸ್ತುಗಳು ಸಿಕ್ಕಿಲ್ಲವೆನ್ನಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಹಲವೆಡೆ ಕಳವು, ದರೋಡೆ ನಡೆದಿರು ತ್ತದೆ. ಆದರೆ ಆ ಸಂಬಂಧ ಯಾರನ್ನೂ ಬಂಧಿಸಲು ಸಾಧ್ಯವಾಗ ಲಿಲ್ಲ. ಕೆಲವೆಡೆ ಸಿಸಿ ಕ್ಯಾಮರಾಗಳಲ್ಲಿ ಕಳ್ಳರ ಚಿತ್ರ ಸಿಕ್ಕಿದ್ದರೂ ಬಂಧಿಸಲು ಸಾಧ್ಯವಾಗಲಿಲ್ಲ.

NO COMMENTS

LEAVE A REPLY