ರೈಲಿನಿಂದ ಬಿದ್ದು ಯುವಕನಿಗೆ ಗಂಭೀರ

0
34

ಕುಂಬಳೆ: ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ಪ್ರಯಾಣಿಕನಾದ ಯುವಕ ಗಂಭೀರ ಗಾಯಗೊಂಡಿದ್ದಾನೆ. ಇಂದು ಬೆಳಿಗ್ಗೆ ಆರಿಕ್ಕಾಡಿಯಲ್ಲಿ ಘಟನೆ ನಡೆದಿದೆ. ಕರ್ನಾಟಕದ ಉಡುಪಿ ಸೇನಾಪುರ ಪಡುಮನೆ ನಿವಾಸಿ ಕೀರ್ತನ್ (೩೫) ಗಾಯಗೊಂಡ ಯುವಕನಾಗಿದ್ದಾನೆ. ಚೆನ್ನೈ- ಮಂಗಳೂರು ಪ್ಯಾಸೆಂಜರ್ ರೈಲುಗಾಡಿಯಲ್ಲಿ ಇಂದು ಬೆಳಿಗ್ಗೆ ಮಂಗಳೂರಿನತ್ತ ಈತ ಪ್ರಯಾಣಿ ಸುತ್ತಿದ್ದನು. ಬಾಗಿಲು ಬಳಿ ನಿಂತಿದ್ದ ವೇಳೆ ಆಯತಪ್ಪಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ರೈಲು ಹಳಿ ಬಳಿ ಯುವಕ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದನ್ನು ಕಂಡ ನಾಗರಿಕರು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸ್.ಐ. ಟಿ.ವಿ. ಅಶೋಕ್ ನೇತೃತ್ವದ ಪೊಲೀಸರು ತೆರಳಿ ಯುವಕನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

NO COMMENTS

LEAVE A REPLY