ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಕ್ರೈಂಬ್ರಾಂಚ್‌ನಿಂದ ತನಿಖೆ

0
33

ಕಾಸರಗೋಡು: ಚೆಮ್ನಾಡ್ ಜಮಾ ಯತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ಹಾಗೂ ಪೊಲೀಸರ ಮೇಲುಂ ಟಾದ ಆಕ್ರಮಣ ಕುರಿತು ಜಿಲ್ಲಾ ಕ್ರೈಂಬ್ರಾಂಚ್ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೈಗೆ ಪಟಾಕಿ ಸಿಡಿಸಿ ಆತಂಕ ಪರಿಸ್ಥಿತಿ ಸೃಷ್ಟಿಸಿದ್ದಾರೆನ್ನಲಾಗಿದೆ. ಈ ಬಗ್ಗೆ ಪ್ರಾಂಶುಪಾಲರು ನೀಡಿದ ಮಾಹಿತಿ ಯಂತೆ ಪೊಲೀಸರು ತಲುಪಿ ತಡೆದರೂ ವಿದ್ಯಾರ್ಥಿಗಳು ಹಿಂಜರಿಯದೆ ಪಟಾಕಿ ಸಿಡಿಸಿದ್ದಲ್ಲದೆ, ಪೊಲೀಸರ ಮೇಲೂ ಕಲ್ಲೆಸೆತ ನಡೆದಿತ್ತೆನ್ನಲಾಗಿದೆ. ಇದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಹಲವರು ಗಾಯಗೊಂಡಿದ್ದರು.

 

NO COMMENTS

LEAVE A REPLY