ಬಿಜೆಪಿ ಕಚೇರಿಗೆ ಆಕ್ರಮಣ: ಇಬ್ಬರ ಬಂಧನ

0
94

ಕುಂಬಳೆ: ಕುಬಣೂರಿನಲ್ಲಿ ಬಿಜೆಪಿ ಕಚೇರಿಗೆ ಆಕ್ರಮಣಗೈದ ಪ್ರಕರಣದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕುಬಣೂರು ನಿವಾಸಿ ಗಳಾದ ನಿಸಾಂ (೨೨), ಖಲೀಲ್ (೨೧) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಡಿ. ೨೪ರಂದು ಈದ್ ಮಿಲಾದ್ ಪ್ರಯುಕ್ತ ಕಾರು ಹಾಗೂ ಬೈಕ್ ಗಳಲ್ಲಿ ತಲುಪಿದ ತಂಡ ಕುಬಣೂರಿನಲ್ಲಿ ಬಿಜೆಪಿ ಕಚೇರಿಗೆ ಆಕ್ರಮಿಸಿ, ಅಲ್ಲಿ ಸ್ಥಾಪಿಸಿದ್ದ ಬಿಜೆಪಿ ಧ್ವಜವನ್ನು ನಾಶಗೊಳಿಸಿ ಹಸಿರು ಬಣ್ಣದ ಧ್ವಜ ಸ್ಥಾಪಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ೨೫ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅಲ್ಲದೆ ಆರೋಪಿಗಳು ಸಂಚರಿಸಿದ ಒಂದು ಕಾರು ಹಾಗೂ ಒಂದು ಬೈಕ್‌ನ್ನು ಕಸ್ಟಡಿಗೆ ತೆಗೆಯಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY