ಉಪ್ಪಳ: ಕೆಲಸಕ್ಕೆಂದು ತೆರಳಿದ ಯುವಕ ಪಾಳು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಬಾಳಿಯೂರು ಬಳಿಯ ಪಿಲಿಕುಡೆಲ್ ನಿವಾಸಿ ಡೆನಿಲ್ ಡಿ’ಸೋಜ ಎಂಬವರ ಪುತ್ರ ರೋಶನ್ ಡಿ’ಸೋಜ(೩೨) ಮೃತ ಯುವಕನಾಗಿದ್ದಾನೆ. ಕೆಂಪುಕಲ್ಲು ಸಾಗಾಟ ಲಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೋಶನ್ ಡಿ’ಸೋಜ ನಿನ್ನೆ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದನು. ರಾತ್ರಿಯಾದರೂ ಆತ ಮನೆಗೆ ಮರಳಿಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟಕ್ಕೆ ತೊಡಗಿದ್ದರು. ಇಂದು ಬೆಳಿಗ್ಗೆಯೂ ಹುಡುಕಾಟ ನಡೆಸುತ್ತಿದ್ದಂತೆ ಮನೆಯಿಂದ ಅಲ್ಪದೂರದಲ್ಲಿ ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿರುವ ಪಾಳು ಮನೆಯೊಳಗೆ ಈತ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತನು ತಂದೆ, ತಾಯಿ ಸರ್ಪಿನ ಡಿ’ಸೋಜ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.