ಸಿಪಿಸಿಆರ್‌ಐ ಕೃಷಿ ಉಪಕರಣಗಳ ಪ್ರದರ್ಶನ ರಾಜ್ಯಪಾಲರಿಂದ ಉದ್ಘಾಟನೆ

0
38

ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿ ಉದ್ದಿಮೆ ಘಟಕಗಳನ್ನು ಆರಂಭಿಸಿದ ಉದ್ದಿಮೆದಾರರ ಸಭೆ ಸಿಪಿಸಿಆರ್‌ಐಯಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ಜತೆಗೆ  ಇದರ ಅಂಗವಾಗಿ ಏರ್ಪಡಿಸಲಾದ ಕೃಷಿ ಉಪಕರಣ ಗಳ ಪ್ರದರ್ಶನವನ್ನು ಇಂದು ಬೆಳಿಗ್ಗೆ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ರಾಜ್ಯಪಾಲ ಪಿ. ಸದಾಶಿವಂ ಉದ್ಘಾಟಿಸಿದರು.

ಸಂಸದ ಪಿ. ಕರುಣಾಕರನ್ ಅಧ್ಯಕ್ಷತೆ ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಸಿಪಿಸಿಆರ್‌ಐ ನಿರ್ದೇಶಕ ಡಾ.ಪಿ. ಚೌಡಪ್ಪ, ಡಾ.ಕೆ. ಮುರಳೀಧರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.

ತಿರುವನಂತಪುರದಿಂದ ರೈಲಿನಲ್ಲಿ ಆಗಮಿಸಿ ಇಂದು ಬೆಳಿಗ್ಗೆ ಕಾಸರಗೋಡು  ನಿಲ್ದಾಣದಲ್ಲಿ ಬಂದಿಳಿದ ರಾಜ್ಯಪಾಲ ಪಿ. ಸದಾಶಿವಂರನ್ನು  ಜಿಲ್ಲಾ ಸೆಶನ್ಸ್ ನ್ಯಾಯಾಧೀಶ ಎಸ್. ಮನೋಹರ್ ಕಿಣಿ, ಚೀಫ್ ಜ್ಯುಡೀಶಿಯಲ್  ಮೆಜಿಸ್ಟ್ರೇಟ್ ರಾಜನ್ ತಟ್ಟಿಲ್, ಬಾರ್ ಅಸೋಸಿಯೇ ಶನ್ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ಕಾರ್ಯದರ್ಶಿ ನ್ಯಾಯವಾದಿ ಕೆ. ಕರುಣಾಕರನ್ ನಂಬ್ಯಾರ್, ಉಪಾಧ್ಯಕ್ಷ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಪಬ್ಲಿಕ್ ಪ್ರೋಸಿಕ್ಯೂಟರ್ ಪಿ.ವಿ. ಜಯರಾಜನ್, ಹೆಚ್ಚುವರಿ ಪಬ್ಲಿಕ್ ಪ್ರೋಸಿಕ್ಯೂಟರ್ ಪಿ. ರಾಘವನ್, ಮಾಜಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಎ.ಎನ್. ಅಶೋಕ್ ಕುಮಾರ್, ನ್ಯಾಯವಾದಿ ಪಿ. ರಾಮ ಚಂದ್ರನ್, ಸಿಪಿಸಿಆರ್‌ಐ ನಿರ್ದೇಶಕ ಡಾ.ಪಿ. ಚೌಡಪ್ಪ ಮೊದಲಾದವರು ರೈಲು ನಿಲ್ದಾಣದಲ್ಲಿ ರಾಜ್ಯಪಾಲರಿಗೆ ಹಾರ್ದಿಕ ಸ್ವಾಗತ ನೀಡಿದರು. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಾ.ಎ. ಶ್ರೀನಿವಾಸ್, ಡಿವೈಎಸ್ಪಿ ಎಂ.ವಿ. ಸುಕುಮಾರನ್‌ರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾಸರಗೋಡು ಸಬ್ ಕೋರ್ಟ್‌ನ ಒಂದು ವರ್ಷದ ತನಕ ಮುಂದುವರಿದ ವಜ್ರಮಹೋತ್ಸವದ ಸಮಾರೋಪ ಸಮಾರಂಭ ವಿದ್ಯಾನಗರ ನ್ಯಾಯಾಲಯ ಸಮುಚ್ಛಯದಲ್ಲಿ ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ರಾಜ್ಯಪಾಲ ಪಿ. ಸದಾಶಿವಂ ಇಂದು ಅಪರಾಹ್ನ ೩ ಗಂಟೆಗೆ ಉದ್ಘಾಟಿ ಸುವರು. ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಹೃಷಿಕೇಶ್ ರೋಯ್ ಅಧ್ಯಕ್ಷತೆ ವಹಿಸುವರು. ಹೈಕೋರ್ಟ್‌ನ ನ್ಯಾಯಾಧೀಶ ಅಲೆಗ್ಸಾಂಡರ್ ಥೋಮಸ್, ಶಾಸಕ ಎನ್.ಎ. ನೆಲ್ಲಿಕುನ್ನು ಶುಭಾಶಂಸನೆ ಗೈಯ್ಯುವರು. ಕಂದಾಯ ಸಚಿವ ಇ. ಚಂದ್ರಶೇಖರನ್ ಪ್ರಧಾನ ಭಾಷಣ ಗಾರರಾಗಿ ಭಾಗವಹಿಸುವರು. ಜಿಲ್ಲಾ ನ್ಯಾಯಾಧೀಶ ಎಸ್. ಮನೋಹರ್ ಕಿಣಿ ಸ್ವಾಗತಿಸುವರು. ಬಾರ್ ಅಸೋಸಿ ಯೇಶನ್‌ನ ಪದಾಧಿಕಾರಿಗಳಾದ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ನ್ಯಾಯವಾದಿ ಕೆ. ಕರುಣಾಕರನ್ ನಂಬ್ಯಾರ್, ನ್ಯಾಯವಾದಿ ವಿ. ಬಾಲಕೃಷ್ಣನ್, ನ್ಯಾಯವಾದಿ ಪದ್ಮನಾಭ,  ಪಿ.ವಿ. ಜಯರಾಜನ್ ಸೇರಿದಂತೆ ಹಲವರು ಭಾಗವಹಿಸುವರು.

NO COMMENTS

LEAVE A REPLY