ರೈಲು ಪ್ರಯಾಣ ಮಧ್ಯೆ ಶಾಸಕ ಕೆ. ಮುರಳೀಧರನ್ ಬ್ಯಾಗ್ ನಾಪತ್ತೆ

0
27

ಕಾಸರಗೋಡು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಕೆ.ಪಿ.ಸಿ.ಸಿ. ಅಧ್ಯಕ್ಷ ಶಾಸಕ ಕೆ. ಮುರಳೀಧರನ್ ಹ್ಯಾಂಡ್‌ಬ್ಯಾಗ್  ಕಾಸರಗೋಡಿಗೆ ಬರುತ್ತಿರುವ ವೇಳೆ ಕಾಣೆಯಾಗಿದೆ.

ಕಾಸರಗೋಡಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಮುರಳೀಧರನ್ ಒಲ್ಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರ್ನಾಕುಳಂನಿಂದ ನಿನ್ನೆ ಪ್ರಯಾಣ ಆರಂಭಿಸಿದ್ದರು. ರೈಲು ಇಂದು ಮುಂಜಾನೆ ೪.೨೦ಕ್ಕೆ ಕಾಸರಗೋಡು ತಲುಪುವಷ್ಟರಲ್ಲಿ ಅವರ ಹ್ಯಾಂಡ್‌ಬ್ಯಾಗ್ ನಾಪತ್ತೆಯಾಗಿದೆ. ಅದರಲ್ಲಿ ಡೈರಿ ಮತ್ತು ಶಾಸಕರ ಅಧಿಕೃತ ಸೀಲ್ ಇತ್ಯಾದಿಗಳು ಒಳಗೊಂಡಿದ್ದವು. ಆ ಬಗ್ಗೆ ಮುರಳೀಧರನ್ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯರು ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY