ಕೇರಳದತ್ತ ಸಾಗತೊಡಗಿದ ಚಂಡಮಾರುತ

0
59

ಕಾಸರಗೋಡು: ಅರಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡವು  ತೀವ್ರಗೊಂಡು ವಾಯುಭಾರ ಇನ್ನಷ್ಟು ಕುಸಿಯತೊಡಗಿದ್ದು, ಅದರಿಂದ ಸೃಷ್ಟಿಯಾಗಿರುವ ಚಂಡಮಾರುತ ಕೇರಳದತ್ತ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಚಂಡಮಾರುತ ೩೬ ತಾಸುಗಳೊಳಗಾಗಿ ಕೇರಳ ಪ್ರವೇಶಿಸಲಿದೆ. ಇದರಿಂದಾಗಿ ಕೇರಳ ಮಾತ್ರವಲ್ಲ ತಮಿಳುನಾಡು, ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಸಿಡಿಲು, ಮಿಂಚು ಮತ್ತು ಗುಡುಗಿನೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೇರಳದಾದ್ಯಂತ ಕಟೆಚ್ಚರ ಪಾಲಿಸಲಾಗುತ್ತಿದೆ. ರಕ್ಷಣೆಗಾಗಿ ನೌಕಾದಳವನ್ನು ಕರೆಸಲಾಗಿದೆ. ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನೌಕಾದಳದ ಹಡಗುಗಳು, ವಿಮಾನಗಳು ತುರ್ತು ಸಂದರ್ಭಕ್ಕೆ ಸ್ಪಂದಿಸಲು ಕೇರಳದತ್ತ ಲಕ್ಷದ್ವೀಪ ಕಿನಾರೆಗಳಲ್ಲಿ ಸಿದ್ಧವಾಗಿದೆ.

ಕೇರಳದಿಂದ  ಮೀನುಗಾರಿಕೆ ಗೆಂದು ಸಮುದ್ರಕ್ಕಿಳಿದಿರುವ ಎಲ್ಲಾ ಮೀನುಗಾರಿಕಾ ದೋಣಿಗಳು ಮತ್ತು ಬೆಸ್ತರು ಈಗಾಗಲೇ ದಡ ಸೇರಿದ್ದಾರೆ. ಇನ್ನೊಂದು ಸೂಚನೆ ನೀಡುವ ತನಕ ಬೆಸ್ತರು ಸಮುದ್ರಕ್ಕಿಳಿಯಬಾರದೆಂದು ಮೀನುಗಾರಿಕಾ ಇಲಾಖೆ ತಿಳಿಸಿದೆ. ಭಾರೀ ಮಳೆ ಸುರಿಯಲಿರುವ ಹಿನ್ನೆಲೆಯಲ್ಲಿ ರಾಜ್ಯದ ೧೬ ಅಣೆಕಟ್ಟುಗಳ  ಶೆಟರ್‌ಗಳನ್ನು ತೆರೆದು ನೀರು ಹೊರಬಿಡುವ ಕ್ರಮ ಕೈಗೊಳ್ಳಲಾಗಿದೆ.  ಇಡುಕ್ಕಿ ಅಣೆಕಟ್ಟಿನ ಒಂದು ಶೆಟರನ್ನು ಇಂದು ಸಂಜೆಯೊಳಗಾಗಿ ತೆರೆಯಲು ವಿದ್ಯುನ್ಮಂಡಳಿ ತೀರ್ಮಾನಿಸಿದೆ. ಚಂಡಮಾರುತ ಮತ್ತು ಭಾರೀ ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಪಾಲಿಸಲಾಗುತ್ತಿದೆ.

NO COMMENTS

LEAVE A REPLY